ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿ ಸಾಕಷ್ಟು ದಿನ ಕಳೆದಿದೆ. ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್, ಅಕ್ಕನ ಮಗ ಚಂದನ್ ಆಗಮಿಸಿದ್ದಾರೆ.
ದರ್ಶನ್ ರನ್ನು ನೋಡಲು 3ನೇ ಬಾರಿ ವಿಜಯಲಕ್ಷ್ಮಿ ಜೈಲಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಬೆಡ್ಶೀಟ್, ಬಟ್ಟೆಯ ಜೊತೆ ಡ್ರೈ ಪ್ರೂಟ್ಸ್, ಸ್ನಾಕ್ಸ್, ಹಣ್ಣುಗಳನ್ನು ದರ್ಶನ್ಗೆ ತಂದಿದ್ದರು. ಆದರೆ ಜೈಲಿನ ಚೆಕ್ಪೋಸ್ಟ್ ಬಳಿ ಹಣ್ಣುಗಳನ್ನಷ್ಟೇ ತನ್ನಿ, ಬೇರೆ ಪದಾರ್ಥಗಳಿಗೆ ಅವಕಾಶವಿಲ್ಲ ಎಂದು ಸಿಬ್ಬಂದಿ ತಡೆದಿದ್ದಾರೆ. ಬಳಿಕ ಸಿಕ್ಕ ಸಮಯಾವಕಾಶದಲ್ಲಿ ಪತ್ನಿ, ಮಗ ಮತ್ತು ಅಕ್ಕನ ಮಗನನ್ನು ದರ್ಶನ್ರನ್ನು ಮಾತನಾಡಿಸಿದ್ದಾರೆ.
ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ.