ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ನಟ ದರ್ಶನ್ ಜೈಲು ಸೇರಿ ಕೆಲ ದಿನಗಳೆ ಕಳೆದಿದೆ. ಇದೀಗ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದಾರೆ. ಈ ಮೂಲಕ ಇದು ವಿಜಯಲಕ್ಷ್ಮಿ ಅವರ ನಾಲ್ಕನೇ ಭೇಟಿಯಾಗಿದೆ. ವಿಜಯಲಕ್ಷ್ಮಿ ಜೊತೆ ದಿನಾಕರ್ ತೂಗುದೀಪ್ ಕೂಡ ಜೈಲಿಗೆ ಭೇಟಿ ನೀಡಿದ್ದರು.
ದರ್ಶನ್ ಜೈಲಿಗೆ ಹೋದ ಬಳಿಕ ವಿಜಯಲಕ್ಷ್ಮಿ ಅವರನ್ನು ಹೊರ ತರಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಇದೀಗ ಪ್ರಕರಣದ ಕುರಿತು ಚರ್ಚಿಸಲು ಮತ್ತು ದರ್ಶನ್ರನ್ನು ನೋಡಲು ವಿಜಯಲಕ್ಷ್ಮಿ ಮತ್ತು ದಿನಕರ್ ಜೊತೆ ಅಕ್ಕನ ಮಗ ಚಂದನ್ ಕೂಡ ಜೈಲಿಗೆ ಭೇಟಿ ನೀಡಿದ್ದಾರೆ.
ಈ ಹಿಂದೆ ಜೈಲಿನ ಊಟವನ್ನು ತಿನ್ನದ ದರ್ಶನ್ ಮನೆ ಊಟಕ್ಕೆ ಹಂಬಲಿಸುತ್ತಿದ್ದರು. ಜೊತೆಗೆ ಮನೆಯೂಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಜೈಲಿನ ಅಧಿಕಾರಿಗಳ ಬಳಿಯೂ ಮನೆಯೂಟ ಬೇಕು ಎಂದು ಮನವಿ ಮಾಡಿದ್ದರು. ಆದರೆ ದರ್ಶನ್ ಮನವಿಯನ್ನು ಕೊರ್ಟ್ ನಿಕಾರಿಸಿತ್ತು. ಸದ್ಯ ಜೈಲಿನಲ್ಲಿ ಕಾಲ ಕಳೆಯುತ್ತಿರುವ ದರ್ಶನ್ ಗೆ ಒಂದೊಂದು ದಿನವು ನರಕವಾಗಿದೆ. ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ ಮೂವರಿಗೆ ಮಾತ್ರ ಭೇಟಿ ಮಾಡಲು ಅವಕಾಶ ಇರುತ್ತದೆ.