ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಜಾಮೀನಿನ ಮೂಲಕ ಬಿಡುಗಡೆ ಆಗಿ ಹೊರ ಬಂದಿದ್ದಾರೆ. ಸದ್ಯ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ದರ್ಶನ್ ವಾಸವಾಗಿದ್ದಾರೆ. ಈ ಮಧ್ಯೆ ಪತ್ನಿ ವಿಜಯಲಕ್ಷ್ಮಿ ಕುಟುಂಬ ಸದಸ್ಯರೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದರ್ಶನ್ಗೆ ಜಾಮೀನು ಸಿಕ್ಕ ಹಿನ್ನೆಲೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಹೊರತುಪಡಿಸಿ ಕುಟುಂಬ ಸಮೇತವಾಗಿ ತೆರಳಿದ್ದಾರೆ. ದಿನಕರ್, ಮೀನಾ ತೂಗುದೀಪ, ವಿಜಯಲಕ್ಷ್ಮಿ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ದರ್ಶನ್ ಮೈಸೂರಿಗೆ ತೆರಳಲು ನಾಲ್ಕು ವಾರಗಳ ಕಾಲ ಅನುಮತಿ ಕೇಳಿದ್ದರು. ಆದರೆ ಕೋರ್ಟ್ ಎರಡು ವಾರಗಳ ಫರ್ಮಿಷ್ ನೀಡಿದೆ. ಈ ಹಿನ್ನೆಲೆಯಲ್ಲಿ ತಮ್ಮ ಫಾರ್ಮ್ ಹೌಸ್ ನಲ್ಲಿ ದರ್ಶನ್ ಕಾಲ ಕಳೆಯುತ್ತಿದ್ದಾರೆ. ಈ ಮಧ್ಯೆ ದರ್ಶನ್ ನಟಿಸುತ್ತಿದ್ದ ‘ಡೆವಿಲ್’ ಸಿನಿಮಾದ ಶೂಟಿಂಗ್ ಜ.20ರ ನಂತರ ಶುರುವಾಗಲಿದೆ ಎನ್ನಲಾಗುತ್ತಿದೆ.