ವಿಜಯಪುರ: ಸಿಮೆಂಟ್ ಅಂಗಡಿ ಮುಂಭಾಗ ವಾಮಾಚಾರ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಬಳಿ ನಡೆದಿದೆ. ಮನುಷ್ಯನ ತಲೆ ಬುರುಡೆ, ಲಿಂಬೆ ಹಣ್ಣು, ಅಕ್ಕಿ ಕಾಳು, ಕುಂಕುಮ ಇಟ್ಟು ಬನ್ನಟ್ಟಿ ಟ್ರೇಡರ್ಸ ಎಂಬ ಸಿಮೆಂಟ್ ಅಂಗಡಿಯ ಮುಂದೆ ವಾಮಾಚಾರ ಮಾಡಿದ್ದಾರೆ.
ಮೌಲಾಸಾಬ್ ರಾಜೇಸಾಬ್ ಬನ್ನಟ್ಟಿ ಎಂಬುವವರಿಗೆ ಸೇರಿದ ಸಿಮೆಂಟ್ ಅಂಗಡಿಯಾಗಿದ್ದು, ವಾಮಾಚಾರ ಮಾಡಿದ್ದನ್ನು ವಿಕ್ಷಣೆ ಮಾಡಲು ಜನರು ಆಗಮಿಸಿದ್ದಾರೆ. ಮುದ್ದೇಬಿಹಾಳ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.