ವಿಜಯಪುರ: ವಿವಿಧ ಬೇಡಿಕೆ ಇಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯತಿ ಪಿಡಿಒ ಸೇರಿದಂತೆ ಸಿಬ್ಬಂದಿಗಳು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ ಹಾಗೂ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ಭೇಟಿ ನೀಡಿ ಪ್ರತಿಭಟನಾ ನಿರತರ ಬೇಡಿಕೆ ಆಲಿಸಿದರು.
ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಗ್ರಾಮ ಪಂಚಾಯತಿ ಸಿಬ್ಬಂದಿಗಳು ನಡೆಸುತ್ತಿದ್ದಾರೆ.
ಇದೇ ವೇಳೆ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಸಮಸ್ಯೆಗಳು ಜೊತೆಗೆ ಸಾಮರಸ್ಯದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ನಿಮ್ಮಲ್ಲಿ ಸಾಕಷ್ಟು ಬೇಡಿಕೆಗಳಿವೆ ಇವುಗಳನ್ನು ಸಾಮರಸ್ಯದಿಂದ ಬಗೆ ಹರಿಸಿಕೊಳ್ಳಬೇಕು. ಈಗ ಸರ್ಕಾರ ಪಂಚ ಗ್ಯಾರಂಟಿ ತಂದ ಪ್ರಯುಕ್ತ ಅದರಲ್ಲಿ ಜಾಸ್ತಿ ಹಣ ಹೋಗಿದೆ, ಅದರಿಂದ 4 ಕೋಟಿ 20 ಲಕ್ಷ ಜನರಿಗೆ ಸಹಾಯವಾಗುತ್ತಿದೆ.
ಇದರ ಮದ್ಯೆ ತಮ್ಮ ಬೇಡಿಕೆ ಕೂಡಾ ಅನಿವಾರ್ಯ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ಇನ್ನೂ ಇದೇ ವೇಳೆ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಅವರು ಮಾತನಾಡಿ ನಿಮಗೆ ನೈತಿಕ ಬೆಂಬಲ ಕೊಟ್ಟು ನೌಕರರ ಬೆಂಬಲಕ್ಕೆ ನಾವಿದ್ದೇವೆ, ನಿಮ್ಮ ಬೇಡಿಕೆ ಏನಿದೆ ಅವುಗಳನ್ನು ಇಡೇರಿಸಲು ಪ್ರಾಮಾಣಿಕ ಪ್ರಯತ್ನ ನಾವು ಕೂಡಾ ಮಾಡುತ್ತೇವೆ, ಈ ವಿಚಾರವಾಗಿ ಸರ್ಕಾರದ ಗಮನಕ್ಕೂ ತರುತ್ತೇನೆ ಎಂದರು.