ವಿಜಯಪುರ: ಜಿಲ್ಲೆಯ ಭೀಮಾತೀರದಲ್ಲಿ ನಡೆದ್ದಂತ ಬಾಗಪ್ಪ ಹರಿಜನ ಹತ್ಯೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ್ನು ಬಂಧಿಸಲಾಗಿತ್ತು.
ಇದೀಗ ಆರೋಪಿಗಳಾದ ಪ್ರಕಾಶ್ ಅಲಿಯಾಸ್ ಪಿಂಟ್ಯಾ, ರಾಹುಲ್ ತಳಕೇರಿ, ಮಣಿಕಂಠ ಬೆನಕೊಪ್ಪ ಮತ್ತು ಸುದೀಪ್ ಕಾಂಬಳೆಯನ್ನು ಪೊಲೀಸರು ಇವತ್ತು ನಗರದ ಎರೆಡನೇ ಹೆಚ್ಚುವರಿ ಮತ್ತು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ನ್ಯಾಯಾಲಯವು ಆರೋಪಿಗಳನ್ನು 14-ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭೀಮಾ ತೀರದ ಹಂತಕರಲ್ಲಿ ಒಬ್ಬನೆಂಬ ಕುಖ್ಯಾತಿಯ ಚಂದಪ್ಪ ಹರಿಜನ್ ಫೆಬ್ರುವರಿ 11 ರಂದು ವಿಜಯಪುರದ ಮದೀನಾ ನಗರದಲ್ಲಿ ಹತ್ಯೆಗೀಡಾಗಿದ್ದ.
