ಬಿಗ್ ಬಾಸ್ ಮನೆ ಅಚ್ಚರಿಗೆ ಕಾರಣವಾಗಿದೆ. ಫಿನಾಲೆಗೆ ಹೋಗೋಕೆ ಯಾರು ಅರ್ಹರು ಎನ್ನುವ ಟಾಸ್ಕ್ ವಿಚಾರವಾಗಿ ಡ್ರೋನ್ ಪ್ರತಾಪ್ ಮತ್ತು ವಿನಯ್ ನಡುವೆ ಕೋಲಾಹಲವೇ ನಡೆದಿತ್ತು. ಬಿಗ್ ಬಾಸ್ ಮನೆಯಲ್ಲಿ ಜಗಳ ಕಾಮನ್ ಆಗಿದ್ದರೂ, ಈ ಬಾರಿಯ ಜಗಳ ನೋಡುಗರಿಗೂ ಅಸಹ್ಯ ಮೂಡಿಸಿತ್ತು. ಡ್ರೋನ್ ಪ್ರತಾಪ್ ಅವರಿಗೆ ವಿನಯ್ ಕೊಳಕು ಭಾಷೆಯಲ್ಲಿ ಬೈದಿದ್ದರು. ಆಡಬಾರದ ಮಾತುಗಳನ್ನು ಆಡಿದ್ದರು. ಹಾಗಾಗಿ ಮನೆಮಂದಿಯಲ್ಲ ವಿನಯ್ ಮೇಲೆ ಬೇಸರಿಸಿಕೊಂಡಿದ್ದರು.
ಈವರೆಗೂ ಎಲಿಮಿನೇಟ್ ಆದವರಲ್ಲಿ ವಿನಯ್ ಗುಂಪಿನವರೇ ಹೆಚ್ಚಿದ್ದಾರೆ. ಇದನ್ನು ನೋಟಿಸ್ ಮಾಡಿದ್ದ ಪ್ರತಾಪ್, ‘ವಿನಯ್ ಅವರು ತಮ್ಮ ಸ್ನೇಹಿತರ ತಪ್ಪನ್ನು ತಿದ್ದಲು ಹೋಗಲಿಲ್ಲ. ಈ ಕಾರಣದಿಂದಾಗಿಯೇ ಅವರು ಮನೆಯಿಂದ ಆಚೆ ಹೋಗಬೇಕಾಯಿತು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಈ ಮಾತು ವಿನಯ್ ಅವರಿಗೆ ಸಾಕಷ್ಟು ಕೋಪ ತರಿಸಿತ್ತು. ಆ ಕೋಪ ಹೇಗಿತ್ತು ಅಂದರೆ, ತಮ್ಮ ಮುಂದೆ ಮೂವರು ಹುಡುಗಿಯರು ಇದ್ದಾರೆ, ಈ ಶೋ ಅನ್ನು ಕೋಟ್ಯಂತರ ಜನರು ವೀಕ್ಷಿಸ್ತಾರೆ ಎನ್ನೋದನ್ನು ಮರೆತು ಸೊಂಟದ ಕೆಳಗಿನ ಪದಗಳನ್ನು ಬಳಸಿದ್ದರು.