ದೆಹಲಿ: ಭಾರತ ತಂಡದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ತಮ್ಮ ಕನಸಿನ ಏಕದಿನ ತಂಡದ ಪ್ಲೇಯಿಂಗ್ XI ಅನ್ನು ರಚಿಸುವಲ್ಲಿ ನಿರತರಾಗಿದ್ದು, ತಮ್ಮ ತಂಡದಲ್ಲಿ ಮೊದಲ ಐವರು ಆಟಗಾರರ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಮೂವರು ಭಾರತೀಯರಿಗೆ ಸ್ಥಾನ ಕಲ್ಪಿಸಿದ್ದಾರೆ.
ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸ್ಫೋಟಕ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರು ಆಡಿದ 251 ಪಂದ್ಯಗಳಿಂದ 8,273 ರನ್ ಬಾರಿಸಿದ್ದು, 15 ಶತಕ ಗಳಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಂಎಸ್ ಧೋನಿ ಸಾರಥ್ಯದ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಆರಂಭಿಕ ಆಟಗಾರ ಸೆಹ್ವಾಗ್, 8 ಪಂದ್ಯಗಳಿಂದ 380 ರನ್ ಗಳಿಸಿದ್ದಲ್ಲದೆ ಬಾಂಗ್ಲಾದೇಶ ವಿರುದ್ಧ 175 ರನ್ ಗಳಿಸಿದ್ದರು.
ತಮ್ಮ ಕನಸಿನ ಏಕದಿನ ತಂಡದ ಪ್ಲೇಯಿಂಗ್ XI ನಲ್ಲಿ ಮೊದಲ ಐವರು ಆಟಗಾರರನ್ನು ಆಯ್ಕೆ ಮಾಡಲು ಕೇಳಿದಾಗ ವೀರೇಂದ್ರ ಸೆಹ್ವಾಗ್, ತನ್ನ ಇಬ್ಬರು ಮಾಜಿ ಸಹ ಆಟಗಾರರ ಜೊತೆಗೆ ಐವರು ಆಟಗಾರರನ್ನು ಹೆಸರಿಸಿದ್ದಾರೆ.
- ರೋಹಿತ್ ಶರ್ಮಾ
2.ವಿರಾಟ್ ಕೊಹ್ಲಿ
3.ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
4.ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್)
- ಜಸ್ಪ್ರೀತ್ ಬುಮ್ರಾ (ಭಾರತ)