ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. 2021 ರಂದು ಮೊದಲ ಹೆಣ್ಣು ಮಗವನ್ನು ಬರಮಾಡಿಕೊಂಡಿದ್ದ ಜೋಡಿ 2024ರಲ್ಲಿ ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ವಾಮಿಕಾಗೆ ನಾಲ್ಕು ವರ್ಷವಾಗಿದ್ದರು ಇದುವರೆಗೂ ಆಕೆಯ ಮುಖವನ್ನು ಜನರಿಗೆ ತೋರಿಸಿಲ್ಲ. ಮಕ್ಕಳ ಗೌಪ್ಯತೆ ಕಾಪಾಡುವಂತೆ ಪಾಪಾರಾಜಿಗಳಲ್ಲಿ ದಂಪತಿ ಬೇಡಿಕೊಂಡಿದ್ದರು.
ವಿರಾಟ್ ಮತ್ತು ಅನುಷ್ಕಾ ಅವರ ಎರಡನೇ ಮಗು ಅಕಾಯ್ ಕೊಹ್ಲಿ ಕೂಡಾ ಹುಟ್ಟಿದಂದಿನಿಂದ ದಂಪತಿ ಮಗುವಿನ ಮುಖ ಎಲ್ಲೂ ತೋರಿಸಿಲ್ಲ. ಮಗುವಿನ ಚಿತ್ರಗಳನ್ನು ಕ್ಲಿಕ್ ಮಾಡಬೇಡಿ ಎಂಬ ದಂಪತಿಗಳ ಕೋರಿಕೆಗೆ ಪಾಪಾರಾಜಿಗಳು ಬದ್ಧರಾಗಿದ್ದಾರೆ. ಇದೀಗ ಪಾಪಾರಾಜಿಗಳು ತಮ್ಮ ಮನವಿಯನ್ನು ಗೌರವಿಸಿದ್ದಕ್ಕಾಗಿ ವಿರುಷ್ಕಾ ದಂಪತಿ ಅವರಿಗೆ ದುಬಾರಿ ಉಡುಗೊರೆ ನೀಡಿದ್ದಾರೆ.
ಮೇ 14, 2024 ರಂದು, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮಕ್ಕಳ ಚಿತ್ರಗಳನ್ನು ಕ್ಲಿಕ್ ಮಾಡದಿರುವ ವಿನಂತಿಯನ್ನು ಶ್ರದ್ಧೆಯಿಂದ ಅನುಸರಿಸಿದ್ದಕ್ಕಾಗಿ ಕ್ಯಾಮರಾಮನ್ಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಜೊತೆಗೆ ದಂಪತಿ ಮೆಚ್ಚುಗೆಯ ಟೋಕನ್ ಆಗಿ ಎಲ್ಲರಿಗೂ ಗಿಫ್ಟ್ ಹ್ಯಾಂಪರ್ ಕಳುಹಿಸಿದ್ದಾರೆ.
ತಮ್ಮ ಸೋಷ್ಯಲ್ ಮೀಡಿಯಾಗಳಲ್ಲಿ ವಿರಾಟ್, ಅನುಷ್ಕಾ ಇಬ್ಬರೂ ‘ನಮ್ಮ ಮಕ್ಕಳ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಮತ್ತು ನಿಮ್ಮ ಅಚಲವಾದ ಸಹಕಾರಕ್ಕಾಗಿ ನಮ್ಮ ಪ್ರಾಮಾಣಿಕವಾಗಿ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಕಾಣಿಸುವಂತೆ ಹ್ಯಾಂಪರ್ನಲ್ಲಿ ಪವರ್ ಬ್ಯಾಂಕ್, ಸಣ್ಣ ಸೈಡ್ ಬ್ಯಾಗ್, ಸ್ಮಾರ್ಟ್ ವಾಚ್ ಮತ್ತು ವಾಟರ್ ಬಾಟಲ್ ಸೇರಿದಂತೆ ಹಲವು ಗ್ಯಾಜೆಟ್ಗಳು ಇವೆ.
‘ಇಂದು, ನಮ್ಮ ನಿವಾಸದಲ್ಲಿ ನಾವು ಚಿಂತನಶೀಲ ಉಡುಗೊರೆ ವಿತರಣೆಯನ್ನು ಸ್ವೀಕರಿಸಿದ್ದೇವೆ. ಗೌರವಾನ್ವಿತ ದಂಪತಿಗಳಾದ ವಿರಾಟ್ ಮತ್ತು ಅನುಷ್ಕಾ ಅವರು ಉಡುಗೊರೆಯನ್ನು ಕಳುಹಿಸಿದ್ದಾರೆ’ ಎಂದು ಪಾಪಾರಾಜಿಯೊಬ್ಬರು ವಿಡಿಯೋದಲ್ಲಿ ತಿಳಿಸಿದ್ದಾರೆ.