ತೆಲುಗಿನ ವರ ಪ್ರಸಾದ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಡಾ.ವಿಷ್ಣುವರ್ಧನ್ ನಟನೆಯ ಸೂರ್ಯವಂಶ ಸಿನಿಮಾದ ಮೂಲಕ ಕನ್ನಡ ಸಿನಿ ರಸಿಕರಿಗೆ ಪರಿಚಯವಾದ ನಟಿ ಇಶಾ ಕೋಪಿಕರ್ ಇಂದಿಗೂ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ನಟಿ ಅಲ್ಟ್ರಾಸಾನೋಗ್ರಾಫಿಕ್ ಫೋಟೋ ಹಂಚಿಕೊಳ್ಳುವ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದರು. 46ನೇ ವಯಸ್ಸಿನಲ್ಲಿ ನಟಿ ಮಗುವಿಗೆ ಜನ್ಮ ನೀಡುತ್ತಿದ್ದಾರೆ ಎಂದು ಅಭಿಮಾನಿಗಳು ಶುಭ ಹಾರೈಸಿದ್ದರು. ಆದ್ರೆ ಇದೀಗ ನಡೆದಿರುವುದೇ ಬೇರೆಯಾಗಿದ್ದ ನಟಿಯ ಪ್ರೀತಿಗೆ ಅಭಿಮಾನಿಗಳು ಮನ ಸೋತಿದ್ದಾರೆ.
2009ರಲ್ಲಿ ಟಿಮ್ಮಿ ನಾರಂಗ್ ಅವರನ್ನು ಮದುವೆಯಾದ ನಟಿ ಇಶಾ ಕೋಪಿಕರ್ ಗೆ ಈಗಾಗಲೇ ರಿಯಾನ್ನಾ ಹೆಸರಿನ ಮಗಳಿದ್ದಾಳೆ. ಈ ಮಧ್ಯೆ ಮತ್ತೋರ್ವ ಮಗುವಿಗೆ ಇಶಾ ಜನ್ಮ ನೀಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಇಶಾ ತಮ್ಮ ಮುದ್ದಿನ ನಾಯಿ ತಾಯಿಯಾಗಿದ್ದಾಳೆ ಎನ್ನುವುದನ್ನು ಈ ರೀತಿಯಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಇಶಾ ಅವರು ತಮ್ಮ ಮುದ್ದಿನ ಶ್ವಾನದ ಮೇಲಿಟ್ಟಿರುವ ಪ್ರೀತಿಯನ್ನು ಕಂಡು ಮೆಚ್ಚುಗೆ ಸೂಚಿಸಿದ್ದಾರೆ.
ಹಿಂದಿ, ತೆಲುಗು, ತಮಿಳು, ಕನ್ನಡ, ಮರಾಠಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಇಶಾ ಕೋಪಿಕರ್ ಇಂದಿಗೂ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಕಾಯ್ದುಕೊಂಡಿದ್ದಾರೆ. ಕನ್ನಡದಲ್ಲಿ ಸೂರ್ಯವಂಶ, ಹೂ ಅಂತಿಯಾ ಉಹೂಂ ಅಂತಿಯಾ ಸೇರಿದಂತೆ ಐದು ಸಿನಿಮಾಗಳಲ್ಲಿ ನಟಿಸಿ ಕನ್ನಡದಲ್ಲೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.