ನವದೆಹಲಿ: ಪೈಲಟ್ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ದಿನಕ್ಕೆ 25-30 ವಿಮಾನಗಳ ಹಾರಾಟ ರದ್ದುಗೊಳಿ ಸಲಾಗುವುದು ಎಂದು ವಿಸ್ತಾರ ಏರ್ಲೈನ್ಸ್ತಿಳಿಸಿದೆ. ಪರಿಸ್ಕೃತ ವೇತನದ ವಿರುದ್ಧ ಅಸಮಾಧಾನಗೊಂಡಿರುವ ಪೈಲಟ್ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್ಲೈನ್ನಲ್ಲಿ ಪೈಲಟ್ಗಳ ಕೊರತೆ ಎದುರಾಗಿದೆ. ಇದರ ಬೆನ್ನಲ್ಲೇ ವಿಸ್ತಾರದಿಂದ ವಿಮಾನಗಳ ಕಾರ್ಯಾಚರಣೆಯಲ್ಲಿ ಕಡಿತಗೊಳಿಸಿರುವ ಬಗ್ಗೆ ಘೋಷಣೆ ಹೊರಬಿದ್ದಿದೆ.
ರದ್ದತಿಗಳನ್ನು ಹೆಚ್ಚಾಗಿ ದೇಶೀಯ ನೆಟ್ವರ್ಕ್ನಲ್ಲಿ ಮಾಡಲಾಗಿದೆ. ಪ್ರಯಾಣಿಕರಿಗೆ ಅನಾನುಕೂಲತೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಏರ್ಲೈನ್ ತಿಳಿಸಿದೆ. ದಿನಕ್ಕೆ ಸುಮಾರು 25-30 ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಲಾಗಿದೆ. ಅಂದರೆ ನಾವು ಕಾರ್ಯನಿರ್ವಹಿಸುತ್ತಿದ್ದ ಸಾಮರ್ಥ್ಯದ ಸರಿಸುಮಾರು 10% ಕಡಿತಗೊಳಿಸಲಾಗುವುದು ಎಂದು ವಿಸ್ತಾರ ಏರ್ಲೈನ್ಸ್ ಮಾಹಿತಿ ನೀಡಿದೆ. ಮಾರ್ಚ್ 31 ರಿಂದ ಆರಂಭವಾಗಿರುವ ಬೇಸಿಗೆ ವೇಳಾಪಟ್ಟಿ ಪ್ರಕಾರ, ವಿಸ್ತಾರ ನಿತ್ಯ 300 ಕ್ಕೂ ಅಧಿಕ ವಿಮಾನಗಳ ಹಾರಾಟ ನಡೆಸುತ್ತಿದೆ.