ನವದೆಹಲಿ:- ಮತದಾರರಿಗೆ ಅಭ್ಯರ್ಥಿಗಳ ಎಲ್ಲಾ ಆಸ್ತಿಗಳ ವಿವರ ತಿಳಿಯುವ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಲೋಕಸಭಾ ಚುನಾವಣಾ ಕಾವು ಹೆಚ್ಚಾಗುತ್ತಲೇ ಇದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಲ್ಲಿ ನಿರತರಾಗಿದ್ದು, ಯಾವ ಅಭ್ಯರ್ಥಿಯ ಬಳಿ ಎಷ್ಟು ಆಸ್ತಿ ಇದೆ ಎಂಬ ವಿಷಯ ಸುದ್ದಿಯಾಗುತ್ತಿದೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮತದಾರರ ಹುಬ್ಬೇರುವಂತೆ ಮಾಡಿದೆ. ಅಭ್ಯರ್ಥಿಯ ಪ್ರತಿಯೊಂದು ಆಸ್ತಿಯ ಬಗ್ಗೆ ತಿಳಿಯಲು ಮತದಾರರಿಗೆ ಸಂಪೂರ್ಣ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಭ್ಯರ್ಥಿಗೂ ಗೌಪತ್ಯೆಯ ಹಕ್ಕಿದೆ
ಅಭ್ಯರ್ಥಿ ಕೂಡ ತಮಗೆ ಸಂಬಂಧಿಸದ ವಿಷಯಗಳ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ, ಅಭ್ಯರ್ಥಿಗಳು ಗಣನೀಯ ಮೌಲ್ಯದ ಅಥವಾ ಐಷಾರಾಮಿ ಜೀವನಶೈಲಿಯನ್ನು ಪ್ರತಿಬಿಂಬಿಸದ ಹೊರತು ಅವರು ಅಥವಾ ಅವರ ಕುಟುಂಬದ ಒಡೆತನದ ಪ್ರತಿಯೊಂದು ಆಸ್ತಿಯನ್ನು ಬಹಿರಂಗಪಡಿಸಬೇಕಾಗಿಲ್ಲ ಎಂದು ಹೇಳಿದೆ.