ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಡ್ಡಾಯ (Voting) ಮತದಾನ ಮಾಡಲು ಮತದಾರರಿಗೆ ಜಾಗೃತಿ ಮೂಡಿಸಲು ಬಿಬಿಎಂಪಿ (BBMP)ವತಿಯಿಂದ ಸತ್ವಾ ಅಪಾರ್ಟ್ ಮೆಂಟ್ ಮತ್ತು ರಹೇಜ ಅಪಾರ್ಟ್ ಮೆಂಟ್ ನಿವಾಸಿಗಳ ಜೊತೆಯಲ್ಲಿ ಮತದಾನ ಜಾಗೃತಿ ಸಭೆ ಮತ್ತು ಪಟ್ಟೇಗಾರಪಾಳ್ಯದಲ್ಲಿ ಸೆಂಟ್ ಪಾಲ್ಸ್ ಬಿಎಡ್ ಕಾಲೇಜು ವಿದ್ಯಾರ್ಥಿಗಳ ಜೊತೆಯಲ್ಲಿ ಜಾಥ ಕಾರ್ಯಕ್ರಮ ನಡೆಸಲಾಯಿತು.
ಈ ವೇಳೆ ವಲಯ ಆಯುಕ್ತರಾದ ಡಾ. ಆರ್.ಎಲ್.ದೀಪಕ್( Deepak) ರವರು ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಮತ ಚಾಲಾಯಿಸಲು ಅವಕಾಶ ನೀಡಿದ್ದು, ಮತದಾನ ಮಾಡುವುದು ಅತ್ಯಮೂಲ್ಯವಾದುದ್ದಾಗಿದೆ. ಆದ್ದರಿಂದ ಎಲ್ಲಾ, ಮತದಾರರು ತಪ್ಪದೇ ಮತದಾನ ಮಾಡಿ ಎಂದು ಕೋರಿದರು. ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕು. ಆದ್ದರಿಂದ ಎಲ್ಲಾ ಯುವ ಮತದಾರರು ಮತದಾನದ ಪ್ರಾಮುಖ್ಯತೆಯನ್ನು ಅರಿತು ಮತದಾನ ಮಾಡಲು ಕೋಡಿದರು.
ಜಂಟಿ ಆಯುಕ್ತರಾದ ಲೋಕನಾಥ್( Loknath)ರವರು ಮಾತನಾಡಿ, ಭಾರತ ದೇಶದ ಪ್ರಜೆಗಳಾದ ತಮಗೆ ಚುನಾವಣೆ ಆಯೋಗ ತಾವುಗಳು ಮತದಾನ ಮಾಡಲು ಬೇಕಾದ ಮತದಾರ ಪಟ್ಟಿ, ಮತದಾನ ಮಾಡಲು ಬೂತ್ ವ್ಯವಸ್ಥೆ ಹಾಗೂ ನಿರ್ಭಿತಿಯಿಂದ ಮತದಾನ ಮಾಡಲು ಸೂಕ್ತ ಭದ್ರತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಒಂದು ಮತದಿಂದ ಬದಲಾವಣೆ ತರಲು ಸಾಧ್ಯ. ಸಂವಿಧಾನ ನೀಡಿರುವ ಮತದಾನ ಹಕ್ಕುನ್ನು ಎಲ್ಲರೂ ತಪ್ಪದೆ ಚಲಾಯಿಸಿ.
80ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನರಿಗೆ ಮನೆಯಿಂದ ಮತದಾನ ನೀಡಲು ಅವಕಾಶ ನೀಡಲಾಗಿದೆ. ಮೇ 10ರಂದು ಪ್ರತಿಯೊಬ್ಬ ಮತದಾರರು ವೋಟ್ ಮಾಡಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಿರಿ ಎಂದು ಹೇಳಿದರು. ಈ ವೇಳೆ ವಲಯ ಆರೋಗ್ಯಧಿಕಾರಿ ಮನೋರಂಜನ್ ಹೆಗಡೆ, ಆರೋಗ್ಯ ವೈದ್ಯಧಿಕಾರಿ ರಾಜೇಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರು ಹಾಗೂ ನೋಡಲ್ ಅಧಿಕಾರಿ ಉಮೇಶ್, ಕಂದಾಯಧಿಕಾರಿ, ಅಪಾರ್ಟ್ ಮೆಂಟ್ ನಿವಾಸಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.