ಮೊಘಲ್ ದೊರೆ ಅಫ್ಜಲ್ ಖಾನ್ ಕೊಲ್ಲಲು ಛತ್ರಪತಿ ಶಿವಾಜಿ ಮಹಾರಾಜ ಬಳಸಿದ್ದ ‘ವಾಘ್ ನಖ್’ (ಹುಲಿ ಉಗುರು ಮಾದರಿ ಅಸ್ತ್ರ) ಲಂಡನ್ನಿಂದ ಭಾರತಕ್ಕೆ ವಾಪಸ್ ಆಗುತ್ತಿದೆ. ಮೂರು ವರ್ಷಗಳ ಅವಧಿಗೆ ಇಂದು ಲಂಡನ್ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ ಭಾರತಕ್ಕೆ ಅಸ್ತ್ರವನ್ನು ತರಲಾಗುತ್ತಿದೆ ಎಂದು ಮಹಾರಾಷ್ಟ್ರ ಸಂಸ್ಕೃತಿ ಸಚಿವ ಸುಧೀರ್ ಮುಂಗಂಟಿವಾರ್ ತಿಳಿಸಿದ್ದಾರೆ.
ಅದೇ ದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಸತಾರಾದ ಶಿವಾಜಿ ಮ್ಯೂಸಿಯಂನಲ್ಲಿ ಈ ಅಸ್ತ್ರವನ್ನು ಇರಿಸಲಾಗುವುದು. ಕಳೆದ ವರ್ಷ ಅಕ್ಟೋಬರ್ನಲ್ಲಿ ಮಹಾರಾಷ್ಟ್ರದ ಸಚಿವರಾದ ಸುಧೀರ್ ಮುಂಗಂಟಿವಾರ್ ಮತ್ತು ಉದಯ್ ಸಾಮಂತ್, ಲಂಡನ್ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ‘ವಾಘ್ ನಖ್’ ಅನ್ನು ಮೂರು ವರ್ಷಗಳ ಅವಧಿಗೆ ಭಾರತಕ್ಕೆ ಮರಳಿ ತರಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರು ಬುದ್ಧಿವಂತಿಕೆಯಿಂದ ಅಫ್ಜಲ್ ಖಾನ್ನನ್ನು ವಾಘ್ ನಖ್ನೊಂದಿಗೆ ಕೊಂದರು. ಶಿವಾಜಿ ಪಟ್ಟಾಭಿಷಿಕ್ತರಾಗಿ ಇಲ್ಲಿಗೆ 350 ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯಲಿವೆ. ಮಹಾರಾಷ್ಟ್ರದಲ್ಲಿ ವಾಘ್ ನಖ್ ಅನ್ನು ಮ್ಯೂಸಿಯಂನಲ್ಲಿ ಜನರ ವೀಕ್ಷಣೆಗೆ ಇಡಲಾಗುವು ಎಂದು ಸಚಿವರು ತಿಳಿಸಿದ್ದಾರೆ.