ಬೊಜ್ಜು ನಮ್ಮಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ.
ಸದ್ಯ ಮಳೆಗಾಲ ಆರಂಭವಾಗಿದೆ. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಅನೇಕ ಮಂದಿ ಕರಿದ ಪದಾರ್ಥಗಳನ್ನು ತಿನ್ನಲು ಬಯಸುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಇದರಿಂದ ದೇಹದ ತೂಕ ಹೆಚ್ಚಾಗುತ್ತದೆ.
ಆದರೆ ನಾವಿಂದು ತಿಳಿಸುವ ಕೆಲ ಪಾನೀಯಗಳನ್ನು ಕುಡಿಯುವ ಮೂಲಕ ಚಳಿಯನ್ನು ನಿಯಂತ್ರಿಸುವುದಲ್ಲದೇ, ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು. ವಿಶೇಷವಾಗಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯ ಕುಡಿಯುವುದರಿಂದ ತಿಂಗಳೊಳಗೆ ನೀವು ಸ್ಲಿಮ್ ಆಗಬಹುದು. ಈ ಕುರಿತ ಒಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ
ಬೆಳಗ್ಗೆ ಎದ್ದ ನಂತರ ನಿಂಬೆ ನೀರನ್ನು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಬೆಳಗ್ಗೆ ಎದ್ದ ನಂತರ ನಿಂಬೆ ನೀರನ್ನು ಕುಡಿಯುವುದು ದೇಹದಿಂದ ಎಲ್ಲಾ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ನಿಂಬೆಯಲ್ಲಿರುವ ಫೈಬರ್ ಪೆಕ್ಟಿನ್ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಂಬೆ ನೀರು ದೇಹವನ್ನು ಹೈಡ್ರೇಟ್ ಆಗಿ ಇಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ನಿಯಂತ್ರಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ವೀಳ್ಯದೆಲೆ ರಸ: ವೀಳ್ಯದೆಲೆಯಲ್ಲಿ ದೇಹಕ್ಕೆ ಬೇಕಾದ ಫೈಬರ್, ವಿಟಮಿನ್
ಎ, ಸಿ, ಕಬ್ಬಿಣ ಮತ್ತು ಪೊಟ್ಯಾಸಿಯಮ್ ಮುಂತಾದ ಎಲ್ಲಾ ಪೋಷಕಾಂಶಗಳಿವೆ. ಆದ್ದರಿಂದ ನೀವು ಬೇಸಿಗೆ ಹಾಗೂ ಮಳೆಗಾಲ ಎಲ್ಲಾ ಸೀಸನ್ನಲ್ಲಿಯೂ ವೀಳ್ಯದೆಲೆ ತಯಾರಿಸಿದ ಜ್ಯೂಸ್ ಅನ್ನು ಸೇವಿಸಿದರೆ ನಿಮ್ಮ ದೇಹವನ್ನು ತೇವಾಂಶದಿಂದ ಇಡಬಹುದು. ವಿಶೇಷವಾಗಿ ಈ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ವೀಳ್ಯದೆಲೆ ತುಂಬಾ ತಂಪಾಗುತ್ತದೆ ಮತ್ತು ಹೊಟ್ಟೆಯ ಕಿರಿಕಿರಿ ಮತ್ತು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದು ದೇಹದಲ್ಲಿರುವ ಬೇಡದ ಕೊಬ್ಬನ್ನು ಕರಗಿಸಿ ಸ್ಲಿಮ್ ಆಗಿ ಇಡಲು ಸಹಾಯ ಮಾಡುತ್ತದೆ
ಹರ್ಬಲ್ ಟೀ: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹರ್ಬಲ್ ಟೀಯನ್ನು ಕುಡಿಯುವುದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಹಾಯ ಮಾಡುತ್ತದೆ . ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಇದು ತುಂಬಾ ಸಹಾಯ ಮಾಡುತ್ತದೆ.
ಇದಲ್ಲದೇ ಹರ್ಬಲ್ ಟೀ ಬೆಳಗ್ಗೆ ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ನೀವು ಶುಂಠಿ, ಕರಿಮೆಣಸು ಮತ್ತು ಪುದೀನದೊಂದಿಗೆ