ಸೀಬೆ ಹಣ್ಣಿನಲ್ಲಿ ಮನುಷ್ಯನ ದೇಹಕ್ಕೆ ಬೇಕಾದ ವಿವಿಧ ಬಗೆಯ ಪೋಷಕಾಂಶಗಳು ಸೇರಿವೆ ಎಂದು ನಮಗೆ ಗೊತ್ತು. ಆದರೆ ಸೀಬೆ ಮರದ ಎಲೆಗಳ ಬಗ್ಗೆ ನಮಗೆ ನಿಮಗೆ ಅಷ್ಟೇನೂ ತಿಳಿದಿಲ್ಲ ಅಲ್ಲವೇ? ಹೌದು. ಬಹಳಷ್ಟು ಅಂತರ್ಜಾಲ ಮೂಲಗಳಿಂದ ಸೀಬೆ ಮರದ ಎಲೆಗಳ ಬಗ್ಗೆ ಇನ್ನಿಲ್ಲದಂತೆ ಚರ್ಚೆ ನಡೆಯುತ್ತಿದೆ.
ಇದಕ್ಕೆ ಕಾರಣ, ಸೀಬೆ ಮರದ ಎಲೆಗಳಲ್ಲಿಯೂ ಸಹ ಹಣ್ಣುಗಳಲ್ಲಿರುವಂತೆ ವಿಟಮಿನ್ ‘ ಬಿ ‘ ಮತ್ತು ವಿಟಮಿನ್ ‘ ಸಿ ‘ ಅಂಶಗಳು ಬಹಳಷ್ಟಿದ್ದು, ನಿಮ್ಮ ತಲೆಯ ಕೂದಲು ಸೊಂಪಾಗಿ ಬೆಳೆಯಲುಕಾರಣ ವಾದ ‘ ಕೊಲಜಿನ್ ‘ ಪ್ರಕ್ರಿಯೆಯನ್ನು ಚುರುಕು ಗೊಳಿಸುತ್ತದೆ. ಇದರಿಂದ ನಿಮ್ಮ ತಲೆಯ ಕೂದಲು ಬಹಳ ದಟ್ಟವಾಗಿ ಬೆಳೆದು ತುಂಬಾ ಆರೋಗ್ಯಕಾರಿ ಯಾಗಿಯೂ ಇರುತ್ತದೆ.
ಸೀಬೆ ಮರದ ಎಲೆಗಳು ಕೂದಲನ್ನು ಸೊಂಪಾಗಿ ಬೆಳೆಯಲು ಸಹಾಯ ಮಾಡುವುದು. ಅಷ್ಟೇ ಅಲ್ಲದೆ, ನಿಮ್ಮ ಕೂದಲಿಗೆ ಒಳ್ಳೆಯ ಹೊಳಪನ್ನು ತಂದುಕೊಟ್ಟು ನೋಡಲು ನಯವಾಗಿ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಸೀಬೆ ಮರದ ಎಲೆಗಳ ಲೋಷನ್ ಒಂದು ಸರಳ ಮನೆಮದ್ದಾಗಿ ಕೆಲಸ ಮಾಡುತ್ತದೆ. ಸೀಬೆ ಮರದ ಎಲೆಗಳಿಂದ ನೀವೇ ನಿಮ್ಮ ಕೈಯಾರೆ ಮಾಡಿಕೊಳ್ಳಬಹುದಾದ ಹೇರ್ ಕೇರ್ ಸಲ್ಯೂಷನ್
ಸೀಬೆ ಮರದ ಎಳೆಗಳ ಲೋಷನ್ ಅನ್ನು ತಯಾರು ಮಾಡಲು ಬೇಕಿರುವ ವಸ್ತುಗಳು:
•ಒಂದು ಹಿಡಿ ಚೆನ್ನಾಗಿ ತೊಳೆದ ತಾಜಾ ಸೀಬೆ ಮರದ ಎಲೆಗಳು
•ಒಂದು ಲೀಟರ್ ನೀರು
•ನೀರು ಮತ್ತು ಸೀಬೆ ಎಲೆಗಳನ್ನು ಚೆನ್ನಾಗಿ ಕುದಿಸಲು ಒಂದು ಪಾತ್ರೆ
•ಕುದಿಸಿದ ಬಳಿಕ ಸೋಸಲು ಒಂದು ಸ್ತ್ರೈನರ್
ತಯಾರು ಮಾಡುವ ರೀತಿ
*ಮೊದಲು ಒಂದು ಸ್ಟೀಲ್ ಪಾತ್ರೆಗೆ ನೀರು ತುಂಬಿ ಗ್ಯಾಸ್ ಸ್ಟವ್ ಮೇಲೆ ಕುದಿಯಲು ಇಡಿ
*ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆ ಚೆನ್ನಾಗಿ ತೊಳೆದ ಸೀಬೆ ಎಲೆಗಳನ್ನು ಪಾತ್ರೆಗೆ ಹಾಕಿ
*ಸುಮಾರು 20 ನಿಮಿಷಗಳ ಕಾಲ ಇದನ್ನು ಹಾಗೆ ಕುದಿಯಲು ಬಿಡಿ
*ನಂತರ ಇದು ತಣ್ಣಗಾದ ಮೇಲೆ ಬೇರೊಂದು ಪಾತ್ರೆಗೆ ಸ್ಟೈನೆರ್ ನ ಸಹಾಯದಿಂದ ಸೋಸಿಕೊಳ್ಳಿ
ತಯಾರಿಸಿದ ಸೀಬೆ ಎಲೆಗಳಿಂದ ಹೇರ್ ಕೇರ್ ಸಲ್ಯೂಷನ್ ಅನ್ನು ಕೂದಲಿಗೆ ಅಪ್ಲೈ ಮಾಡುವ ಬಗೆ:
ಮೊದಲಿಗೆ ನಿಮ್ಮ ಕೂದಲನ್ನು ಶಾಂಪೂವಿನಿಂದ ಚೆನ್ನಾಗಿ ತೊಳೆದು ಆರಲು ಬಿಡಿ. ಯಾವುದೇ ಕಾರಣಕ್ಕೂ ಹೇರ್ ಕಂಡೀಶನ್ ಮಾಡಬೇಡಿ. ಕೂದಲು ಆರಿದ ನಂತರ ನೀವು ತಯಾರಿಸಿಟ್ಟುಕೊಂಡ ಸೀಬೆ ಎಲೆಯ ಹೇರ್ ಕೇರ್ ಸಲ್ಯೂಷನ್ ಅನ್ನು ನಿಮ್ಮ ಕೂದಲಿನ ಬುಡದಿಂದ ತುದಿಯವರೆಗೂ ಮತ್ತು ನೆತ್ತಿಯ ಮೇಲೆ ಸಂಪೂರ್ಣವಾಗಿ ಹರಡುವಂತೆ ಹಚ್ಚಿ.
*ಸುಮಾರು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ.
*ಸುಮಾರು ಎರಡು ಗಂಟೆಗಿಂತಲೂ ಅಧಿಕ ಕಾಲ ನಿಮ್ಮ ಕೂದಲು ಈ ಸಲ್ಯೂಷನ್ ನ ಒದ್ದೆಯಲ್ಲಿ ಹಾಗೆ ಇರಬೇಕು. ಬೇಕಿದ್ದರೆ ಒಂದು ಟವಲ್ ಅನ್ನು ನಿಮ್ಮ ತಲೆಗೆ ಸುತ್ತಿಕೊಂಡು ನೀವು ಆರಾಮವಾಗಿ ನಿದ್ರಿಸಬಹುದು.
*ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ನಿಮ್ಮ ತಲೆಯನ್ನು ತೊಳೆದುಕೊಳ್ಳಿ.