ಇಂದಿನ ಕಾಲದಲ್ಲಿ ವಾಟ್ಸ್ಆ್ಯಪ್ ಬಳಸದೆ ಇರುವವರು ಯಾರು ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ವಾಟ್ಸ್ಆ್ಯಪ್ ಬಳಸುತ್ತಾರೆ. ವಾಟ್ಸ್ಆ್ಯಪ್ ತನ್ನ ಪ್ರೈವಸಿಯನ್ನು ಅದೆಷ್ಟೇ ಗಟ್ಟಿಗೊಳಿಸಿದರೂ ಥರ್ಡ್ ಪಾರ್ಟಿ ಆ್ಯಪ್ಗಳ ಟ್ರಿಕ್ ಬಳಸಿ ಬಳಕೆದಾರರು ಅನೇಕ ವಿಚಾರಗಳನ್ನ ತಿಳಿಯುತ್ತಾರೆ. ಅಲ್ಲದೆ ವಾಟ್ಸ್ಆ್ಯಪ್ ಟ್ರಿಕ್ಗೆಂದೇ ಅದೆಷ್ಟೊ ಆ್ಯಪ್ಗಳು ಈಗ ಹುಟ್ಟುಕೊಂಡಿದೆ. ಏನನ್ನಾದರು ಮೆಸೇಜ್ ಮಾಡಿ ಬಳಿಕ ಡಿಲೀಟ್ ಮಾಡಿದರು ಎಂದಾದರೆ ಅದನ್ನು ನೋಡಲು WAMR, WhatsDeleted, Deleted Whatsappmessage ಸೇರಿದಂತೆ ಅನೇಕ ಥರ್ಡ್ ಪಾರ್ಟಿ ಆ್ಯಪ್ಗಳಿವೆ.
ಇನ್ನೂ ವಾಟ್ಸ್ಆ್ಯಪ್ ನಲ್ಲಿ ಸ್ಟೇಟಸ್ ಹಾಕಿ ಯಾರು ನಮ್ಮ ಸ್ಟೇಟಸ್ ನೋಡಿದ್ದಾರೆ ಎಂದು ತಿಳಿಯಬಹುದು. ಆದರೆ ಡಿಪಿ ಯಾರು ನೋಡಿದ್ದಾರೆ ಎಂದು ನೋಡಲು ಸಾಧ್ಯವಿಲ್ಲ. ಈ ಆಯ್ಕೆಯನ್ನು ವಾಟ್ಸ್ಆ್ಯಪ್ ನೀಡಿಲ್ಲ. ಆದರೆ ಒಂದು ಆ್ಯಪ್ನ ಮೂಲಕ ವಾಟ್ಸ್ಆ್ಯಪ್ನಲ್ಲಿ ನಾವು ಹಾಕಿದ ಡಿಪಿಯನ್ನು ಯಾರು ನೋಡಿದ್ದಾರೆ ಎಂದು ತಿಳಿಯಬಹುದು. ಅದು ಹೇಗೆ, ಆ ಆ್ಯಪ್ ಯಾವುದು, ಅದನ್ನು ಹೇಗೆ ಡೌನ್ಲೋಡ್ ಮಾಡೋದು?.
ಯಾವುದು ಆ ಆ್ಯಪ್:
ವಾಟ್ಸ್ಆ್ಯಪ್ ಡಿಪಿಗೆ ಪ್ರೈವೆಸಿಯಲ್ಲಿ ಓನ್ಲಿ ಫಾರ್ ಮೈ ಕಾಂಟ್ಯಾಕ್ಟ್ ಅಂತ ಕೊಟ್ಟರೂ ಬೇರೆ ಅವರ ಡಿಪಿ ನೋಡಲು ನಮಗೆ ಸಾಧ್ಯವಾಗುತ್ತದೆ. ಆದರೇ, ಇದಕ್ಕೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಒಂದು ಬೇಕಾಗುತ್ತದೆ. ಈ ಆ್ಯಪ್ ಮೂಲಕ ವಾಟ್ಸ್ಆ್ಯಪ್ನಲ್ಲಿ ನಿಮ್ಮ ಡಿಪಿಯನ್ನು ಯಾರು ನೋಡುತ್ತಾರೆ ಅನ್ನೋದು ಗೊತ್ತಾಗುತ್ತದೆ. ಅಚ್ಚರಿ ಎಂದರೆ ಈ ವಿಧಾನದಿಂದ ನಿಮಗೆ ಗೊತ್ತಿಲ್ಲದಂತೆ ನಿಮ್ಮ ಡಿಪಿ ನೋಡುವವರ ಹೆಸರು ಮತ್ತು ನಂಬರ್ ಕೂಡ ತಿಳಿದುಕೊಳ್ಳಬಹುದಾಗಿದೆ.
ನಿಮಗೆ ನಿಮ್ಮ ಕಾಂಟಾಕ್ಟ್ಲಿಸ್ಟ್ ನಲ್ಲಿರುವವರು ಬಿಟ್ಟು, ಬೇರೆ ಯಾರಾದರು ನಿಮ್ಮ ಡಿಪಿ ನೋಡುತ್ತಿರಬಹುದಾ ಅನ್ನೋ ಅನುಮಾನ ಹುಟ್ಟಿದರೆ ನಿಮಗೆ ಗೊತ್ತಿಲ್ಲದಂತೆ ಯಾರು ನಿಮ್ಮ ಡಿಪಿ ನೋಡುತ್ತಿದ್ದಾರೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ನಿಮ್ಮ ವಾಟ್ಸಾಪ್ ಪ್ರೊಫೈಲ್ ಫೋಟೋವನ್ನು ಯಾರು ನೋಡುತ್ತಿದ್ದಾರೆ? ಎನ್ನುವುದನ್ನು ತಿಳಿಯಲು, ನೀವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ.
WhatsApp- Who Viewed Me:
ನಿಮ್ಮ ವಾಟ್ಸ್ಆ್ಯಪ್ ಪ್ರೊಫೈಲ್ ಫೋಟೋವನ್ನು ಯಾರು ನೋಡುತ್ತಿದ್ದಾರೆಂದೆ ತಿಳಿಯಲು ನೀವು ಪ್ಲೇ ಸ್ಟೋರ್ನಿಂದ WhatsApp- Who Viewed Me ಅಥವಾ Whats Tracker ಎಂಬ ಥರ್ಡ್ ಪಾರ್ಟಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕಗುತ್ತದೆ. ಇದರೊಂದಿಗೆ, 1mobile market ಡೌನ್ಲೋಡ್ ಕೂಡ ಮಾಡಬೇಕಾಗುತ್ತದೆ. 1mobile market ಆ್ಯಪ್ ಇಲ್ಲದೆ WhatsApp- Who Viewed Me ಡೌನ್ಲೋಡ್ ಆಗುವುದಿಲ್ಲ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.
ನಿಮಗೆ ಗೊತ್ತಿಲ್ಲದಂತೆ ಯಾರೆಲ್ಲಾ ನಿಮ್ಮ ವಾಟ್ಸ್ಆ್ಯಪ್ ಪ್ರೊಫೈಲ್ ಫೋಟೋವನ್ನು ನೋಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು ನಿಮಗೆ ನೀಡುತ್ತದೆ. ಅಪ್ಲಿಕೇಶನ್ ಮೂಲಕ ಕಳೆದ 24 ಗಂಟೆಗಳಲ್ಲಿ ನಿಮ್ಮ ಪ್ರೊಫೈಲ್ ಫೋಟೋವನ್ನು ಅಥವಾ ಡಿಪಿಯನ್ನು ಯಾರು ನೋಡುತ್ತಿದ್ದಾರೆ ಎನ್ನುವ ಲಿಸ್ಟ್ ನಿಮಗೆ ದೊರಕುತ್ತದೆ. ಈ ಲಿಸ್ಟ್ ಮೂಲಕ ನಿಮಗೆ ಗೊತ್ತಿಲ್ಲದಂತೆ ಅಂದರೆ ಕದ್ದು ಯಾರು ನಿಮ್ಮಪ್ರೊಫೈಲ್ ಫೋಟೋ ನೋಡುತ್ತಿದ್ದಾರೆ ಎನ್ನುವ ಮಾಹಿತಿಯನ್ನು WhatsApp- Who Viewed Me ಸಹಕರಿಸುತ್ತದೆ.
ಎಚ್ಚರವಿರಲಿ:
ಎಲ್ಲರೂ ಸಾಮಾನ್ಯವಾಗಿ ವಾಟ್ಸ್ಆ್ಯಪ್ ಡಿಪಿಯನ್ನು ಚೇಂಜ್ ಮಾಡುತ್ತಲೇ ಇರುತ್ತಾರೆ. ಡಿಪಿಯನ್ನು ಯಾರು ನೋಡಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಹಾಗೆಯೆ ವಾಟ್ಸ್ಆ್ಯಪ್ ಡಿಪಿಯನ್ನು ಯಾರು ನೋಡಿದ್ದಾರೆ ಎಂದು ತಿಳಿಯಬೇಕಾದರೆ ಮೊಬೈಲ್ ನಲ್ಲಿ ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚವಹಿಸಿ.
ಯಾಕೆಂದರೆ ಈ ಥರ್ಡ್ ಪಾರ್ಟಿ ಆ್ಯಪ್ಗಳು ನಿಮ್ಮ ಫೋನ್ಗೆ ಎಷ್ಟು ಸುರಕ್ಷಿತ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇರುವುದಿಲ್ಲ. ಇದು ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಡೇಟಾವನ್ನು ತನ್ನ ವಶಕ್ಕೆ ಪಡೆಯಬಹುದು. ಹೀಗಾಗಿ ಈ ಥರ್ಡ್ ಪಾರ್ಟಿ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಎಚ್ಚರವಹಿಸಿ. ನಂಬಿಕೆಗೆ ಅರ್ಹವಾದ ಆ್ಯಪ್ ಸ್ಟೋರ್ ಗಳಿಂದ ಮಾತ್ರ ಇದನ್ನ ಡೌನ್ಲೋಡ್ ಮಾಡಿ.