ಈ ವಿಧಾನಗಳಲ್ಲಿ ಜೀರಿಗೆ ನೀರನ್ನು ಸೇವಿಸಿದರೆ ಬಹಳ ಬೇಗನೆ ತೂಕವನ್ನು ಕಳೆದುಕೊಳ್ಳಬಹುದು.
1. ತೂಕ ನಷ್ಟಕ್ಕೆ ಜೀರಿಗೆ ಮತ್ತು ಕರಿಬೇವಿನ ನೀರು :
ಜೀರಿಗೆ ಮತ್ತು ಕರಿಬೇವಿನ ಎಲೆಯ ನೀರು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಾತ್ರಿ ಒಂದು ಲೋಟ ನೀರಿಗೆ 1 ಚಮಚ ಜೀರಿಗೆ ಮತ್ತು 5-7 ಕರಿಬೇವಿನ ಎಲೆಗಳನ್ನು ಹಾಕಿಡಿ. ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಕುಡಿಯಿರಿ.ಪ್ರತಿದಿನ ಈ ಪಾನೀಯವನ್ನು ಕುಡಿಯುವುದರಿಂದ ಚಯಾಪಚಯ ದರ ಹೆಚ್ಚಾಗುತ್ತದೆ. ಅಲ್ಲದೆ ಜೀರಿಗೆ ಮತ್ತು ಕರಿಬೇವಿನ ಎಲೆಗಳ ನೀರು BMI ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2. ತೂಕ ನಷ್ಟಕ್ಕೆ ಜೀರಿಗೆ ಮತ್ತು ಕೊತ್ತಂಬರಿ ನೀರು :
ಜೀರಿಗೆ ಮತ್ತು ಕೊತ್ತಂಬರಿ ಎರಡೂ ತೂಕವನ್ನು ಕಡಿಮೆ ಮಾಡುತ್ತದೆ. ಇಲ್ಲಿ ಕೂಡಾ ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಈ ನೀರನ್ನು ಕುಡಿಯಬೇಕು. ಇದು ನಿಮ್ಮನ್ನು ದೀರ್ಘಕಾಲ ಹಸಿವಿನಿಂದ ದೂರವಿಟ್ಟು ತೂಕವನ್ನು ಕಡಿಮೆ ಮಾಡುತ್ತದೆ. ಜೀರಿಗೆ ಮತ್ತು ಕೊತ್ತಂಬರಿ ಬೀಜವನ್ನು ನೀರಿನಲ್ಲಿ ಕುದಿಸಿ ಕೂಡಾ ಆ ನೀರನ್ನು ಕುಡಿಯಬಹುದು.
3. ತೂಕ ನಷ್ಟಕ್ಕೆ ಜೀರಿಗೆ ಮತ್ತು ನಿಂಬೆ ನೀರು :
ಜೀರಿಗೆಯಂತೆ, ನಿಂಬೆ ಕೂಡಾ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ . 2 ಚಮಚ ಜೀರಿಗೆ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಚೆನ್ನಾಗಿ ಕುದಿಸಿ. ನೀರನ್ನು ಸೋಸಿಕೊಂಡು ಆ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯಿರಿ.ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದರೆ ಕ್ರಮೇಣ ತೂಕ ಕಡಿಮೆಯಾಗಲು ಶುರುವಾಗುತ್ತದೆ.
4. ತೂಕ ನಷ್ಟಕ್ಕೆ ಜೀರಿಗೆ ಮತ್ತು ಚಕ್ಕೆ ನೀರು :
ಚಕ್ಕೆ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಜೀರಿಗೆ ಮತ್ತು ಚಕ್ಕೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿಯಬಹುದು. ಇದಕ್ಕಾಗಿ, ಒಂದು ಲೋಟ ನೀರಿನಲ್ಲಿ 1 ಚಮಚ ಜೀರಿಗೆ ಮತ್ತು ಚಕ್ಕೆ ತುಂಡುಗಳನ್ನು ಹಾಕಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಕುದಿಸಿ ಕುಡಿಯಿರಿ. ಇದು ತೂಕವನ್ನು ಕಳೆದುಕೊಳ್ಳಲು ಬಹಳಷ್ಟು ಸಹಾಯ ಮಾಡುತ್ತದೆ