ಬೆಂಗಳೂರು: ಪಾಕಿಸ್ತಾನ ವಿರುದ್ಧ ಶುಕ್ರವಾರ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮಿಚೆಲ್ ಮಾರ್ಷ್ (Mitchell Marsh) ಹಾಗೂ ಡೇವಿಡ್ ವಾರ್ನರ್ (David Warner) ಆರಂಭಿಕ ಜೋಡಿ ಭರ್ಜರಿ ಶತಕಗಳನ್ನು ಸಿಡಿಸುವ ಜೊತೆಗೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ (Australia) ತಂಡವು 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಗಳಿಸುವ ಮೂಲಕ ಎದುರಾಳಿ ಪಾಕ್ (Pakistan) ತಂಡಕ್ಕೆ 368 ರನ್ಗಳ ಗುರಿ ನೀಡಿದೆ. ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2011ರ ಮಾರ್ಚ್ 16ರಂದು ಬ್ರಾಡ್ ಹ್ಯಾಡಿನ್ ಮತ್ತು ಶೇನ್ ವ್ಯಾಟ್ಸನ್ ಜೋಡಿ ಕೆನಡಾ ವಿರುದ್ಧ ಮೊದಲ ವಿಕೆಟ್ಗೆ 183 ರನ್ಗಳ ಜೊತೆಯಾಟ ನೀಡಿತ್ತು. ಇದು ಆಸೀಸ್ ಪರ ಮೊದಲ ವಿಕೆಟ್ಗೆ ಅತಿಹೆಚ್ಚು ರನ್ ಜೊತೆಯಾಟ ನೀಡಿದ್ದ ಜೋಡಿಯಾಗಿತ್ತು. 259 ರನ್ಗಳ ಜೊತೆಯಾಟ ನೀಡುವ ಮೂಲಕ ವಾರ್ನರ್ ಹಾಗೂ ಮಾರ್ಚ್ ಜೋಡಿ ಈ ದಾಖಲೆಯನ್ನು ಮುರಿದಿದೆ.
ಅಲ್ಲದೇ ಆಸೀಸ್ ಪರ ಭರ್ಜರಿ ಶತಕ ಸಿಡಿಸಿ ಮಿಂಚಿದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಜೋಡಿ 33.5 ಓವರ್ಗಳಲ್ಲಿ ಮೊದಲ ವಿಕೆಟ್ಗೆ 259 ರನ್ ಬಾರಿಸುವ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ವಿಕೆಟ್ಗೆ ಅತಿಹೆಚ್ಚು ರನ್ ಬಾರಿಸಿದ 2ನೇ ಜೋಡಿ ಎಂಬ ವಿಶೇಷ ಸಾಧನೆ ಮಾಡಿದೆ. 2011ರ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ವಿಕೆಟ್ಗೆ 282 ರನ್ಗಳ ಜೊತೆಯಾಟ ನೀಡಿದ್ದ ಶ್ರೀಲಂಕಾ ತಂಡದ ತರಂಗ, ದಿಲ್ಶಾನ್ ಜೋಡಿ ಮೊದಲ ಸ್ಥಾನದಲ್ಲಿದೆ.