ಬೆಂಗಳೂರು:- ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಕಾಲಿಟ್ಟ ಬಳಿಕ ಭಾರೀ ಸುದ್ದಿಯಾದ್ರು. ಇದೀಗ ಹಳ್ಳಿಕಾರ್ ಒಡೆಯ ಎಂಬ ಬಿರುದು ವರ್ತೂರು ಸಂತೋಷ್ಗೆ ಮುಳುವಾಗಿದೆ. ಹಳ್ಳಿಕಾರ್ ಸಂರಕ್ಷಕರು ಸಂತೋಷ್ ವಿರುದ್ದ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ವರ್ತೂರ್ ಸಂತೋಷ್ ತನ್ನನ್ನು ತಾನು ಹಳ್ಳಿಕಾರ್ ಒಡೆಯ ಎಂದು ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲ. ಅವರನ್ನು ಹಳ್ಳಿಕಾರ್ ಒಡೆಯ ಎಂದು ಕರೆಯೋದನ್ನು ತಕ್ಷಣ ನಿಲ್ಲಿಸಬೇಕು. ವರ್ತೂರು ಸಂತೋಷ್ ಅವರನ್ನು ಹಳ್ಳಿಕಾರ್ ಒಡೆಯ ಎಂದು ಕರೆಯೋದು ನಮ್ಮ ಜನಾಂಗಕ್ಕೆ ಮಾಡುತ್ತಿರುವ ಅಪಮಾನವಾಗಿದೆ ಎಂದು ಹಳ್ಳಿಕಾರ್ ಸಂರಕ್ಷಕರು ಅಸಮಾಧಾನ ಹೊರ ಹಾಕಿದ್ದಾರೆ.
ಹಳ್ಳಿಕಾರ್ ಒಡೆಯ ಎಂದೇ ವರ್ತೂರ್ ಸಂತೋಷ್ ಅವರನ್ನು ಕೆಲವರು ಗುರುತಿಸುತ್ತಿದ್ದಾರೆ. ಆ ರೀತಿ ಸಂತೋಷ್ ಪ್ರಚಾರ ಗಿಟ್ಟಿಸಿಕೊಳ್ತಿದ್ದಾರೆ. ಹಳ್ಳಿಕಾರ್ ಒಡೆಯ ಎನ್ನುವ ಬಿರುದೇ ಸಂತೋಷ್ಗೆ ಈಗ ಮುಳುವಾಗಿದೆ. ಹಳ್ಳಿಕಾರ್ ಸಂರಕ್ಷಣೆ ಮಾಡ್ತಿರುವ ರೈತರಿಗೆ ಇದ್ರಿಂದ ಅವಮಾನ ಆಗಿದೆ. ಅಷ್ಟೇ ಅಲ್ಲದೇ ಗೂಗಲ್ ನಲ್ಲಿಯೂ ಛೇರ್ ಮೇನ್ ಆಫ್ ಆಲ್ ಇಂಡಿಯಾ ಹಳ್ಳಿಕಾರ್ ಕನ್ಸರ್ವೇಶನ್ ಎಂದು ತಪ್ಪು ಸಂದೇಶವನ್ನು ಜನರಿಗೆ ನೀಡ್ತಿದ್ದಾರೆ.
ಇದ್ರಿಂದ ಅನೇಕ ಜನರಿಗೆ ತಪ್ಪು ಸಂದೇಶ ರವಾನಿ ಆಗ್ತಿದೆ. ವರ್ತೂರ್ ಸಂತೋಷನಿಂದಲೇ ಹಳ್ಳಿಕಾರ್ ತಳಿ ಹುಟ್ಟಿತು ಎನ್ನುವ ರೀತಿಯಲ್ಲಿ ಸಂದೇಶ ತಲುಪುತ್ತದೆ. ಇಂತಹ ಪ್ರಚಾರದ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಎಲ್ಲಾ ದಾಖಲಾತಿಗಳನ್ನು ಸಂಗ್ರಹಿಸಲಾಗಿದೆ. ವರ್ತೂರು ಸಂತೋಷ್ ಹಾಗೂ ಗೂಗಲ್ ವಿರುದ್ದ ಕಾನೂನು ಹೋರಾಟ ಮಾಡ್ತೇವೆ ಎಂದು ಹಳ್ಳಿಕಾರ್ ಸಂರಕ್ಷಕ ರವಿ ಪಟೇಲ್ ವಾರ್ನಿಂಗ್ ಕೊಟ್ಟಿದ್ದಾರೆ.
ಹಳ್ಳಿಕಾರ್ ತಳಿಗೆ ಇತಿಹಾಸವಿದೆ. ಪುರಾಣಗಳಲ್ಲೂ ಉಲ್ಲೇಖವಿದೆ. ಹಲವು ವರ್ಷಗಳಿಂದ ಇದನ್ನು ಉಳಿಸಿಕೊಂಡು ಬಂದವರು ಅನೇಕ ರೈತರು ಇದ್ದಾರೆ. ಒಕ್ಕಲಿಗರ ಉಪ ಪಂಗಡ ಹಳ್ಳಿಕಾರ್, ಹಳ್ಳಿಕಾರ್ ಜನಾಂಗವೇ ಅಂತಾನೆ ಒಂದು ಜನಾಂಗ ಇದೆ. ಅದಕ್ಕೆ ಸೂಕ್ತ ದಾಖಲೆಗಳಿವೆ. ಹೀಗಿರುವಾಗ ಸಮಾಜಕ್ಕೆ ತಪ್ಪು ಕಲ್ಪನೆ ಕೊಡುವುದು ಸರಿಯಲ್ಲ ಎಂದು ಹಳ್ಳಿಕಾರ್ ಸಂರಕ್ಷಕ ರವಿ ಪಟೇಲ್ ಹೇಳಿದ್ದಾರೆ.