ಮಹಾಶಿವರಾತ್ರಿ ಯನ್ನು ಭಾರತದ ಜೊತೆಗೆ ದೇಶ, ವಿದೇಶದಲ್ಲೂ ಆಚರಣೆ ಮಾಡುತ್ತಾರೆ. ಭಾರತದಲ್ಲಿ ಮಹಾಶಿವರಾತ್ರಿಗೆ ಇನ್ನೂ ಕೆಲವೇ ಗಂಟೆಗಳು ಮಾತ್ರವೇ ಭಾಕಿ ಇದೆ. ಇದೀಗ ಈ ಬಾರಿಯ ಮಹಾಶಿವರಾತ್ರಿಯನ್ನು ಬಹಳ ಅದ್ಧೂರಿಯಾಗಿ ನ್ಯೂಯಾರ್ಕ್ನ ಜನರು ಆಚರಿಸಿದ್ದಾರೆ. ಹೀಗಾಗಿ ಸೋಮವಾರ ಸಂಜೆ ನ್ಯೂಯಾರ್ಕ್ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್ನಲ್ಲಿ “ಶಿವ” ಮತ್ತು “ಶಂಭೋ” ಗೀತೆಗಳನ್ನು ಪ್ರಸಾರ ಮಾಡಲಾಗಿದೆ. ಜೊತೆಗೆ ಸದ್ಗುರು ಅವರ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಸಹ ಪ್ರಸಾರ ಮಾಡಲಾಗಿದೆ.
ನ್ಯೂಯಾರ್ಕ್ ನಲ್ಲಿ ಶಿವರಾತ್ರಿಯ ವಿಡಿಯೋ ಹಂಚಿಕೊಂಡಿರುವ ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಸದ್ಗುರು ಅವರು, ‘ನ್ಯೂಯಾರ್ಕ್ ಜನರು ಮಹಾಶಿವರಾತ್ರಿಯನ್ನು ಸ್ವಾಗತಿಸಿದ್ದಾರೆ. ಶಿವನ ಮಹಾರಾತ್ರಿಯ ಮಹತ್ವವನ್ನು ಜಗತ್ತು ಅರಿತುಕೊಳ್ಳುತ್ತಿದೆ. ಇದು ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಪರಿವರ್ತನೆಯ ಅವಕಾಶವಾಗಿದೆ. ನಾವು ಅದನ್ನು ಸಾಕಾರಗೊಳಿಸೋಣ. ಇದು ಆಚರಣೆಯ ರಾತ್ರಿ. ಆಧ್ಯಾತ್ಮಿಕ ಅನುಭವಗಳು ಟೈಮ್ಸ್ ಸ್ಕ್ವೇರ್ ಎಲ್ಲಿಯಾದರೂ ಕಾಣಬಹುದಾಗಿದೆ’ ಎಂದಿದ್ದಾರೆ.
ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಾರ್ಚ್ 8ರ ಸಂಜೆ 6 ರಿಂದ ಮಾರ್ಚ್ 9ರ ಬೆಳಿಗ್ಗೆ 6 ರವರೆಗೆ ಇಶಾ ಫೌಂಡೇಶನ್ ವತಿಯಿಂದ ತಮಿಳುನಾಡಿನಲ್ಲಿರುವ ಅತಿ ಎತ್ತರದ ಆದಿಯೋಗಿ ಶಿವನ ಪ್ರತಿಮೆ ಮುಂದೆ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ. ಮಹಾಶಿವರಾತ್ರಿಯ ರಾತ್ರಿಯಂದು ಸದ್ಗುರುಗಳ ಸಮ್ಮುಖದಲ್ಲಿ ಧ್ಯಾನ, ಸಂಗೀತ ಮತ್ತು ಮನಮೋಹಕ ನೃತ್ಯ ಪ್ರದರ್ಶನಗಳು ನಡೆಯಲಿವೆ. ಈ ಕಾರ್ಯಕ್ರಮವನ್ನು ವಿಶ್ವದಾದ್ಯಂತ 22 ಭಾಷೆಗಳಲ್ಲಿ ಸದ್ಗುರುಗಳ ಯೂಟ್ಯೂಬ್ ಚಾನೆಲ್ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.