ಮಂಡ್ಯ: ಶೀಘ್ರದಲ್ಲೇ ನೀರು ಸಲಹಾ ಸಮಿತಿ ಸಭೆ ಕರೆದು ನಾಲೆಗಳಿಗೆ ನೀರು ಹರಿಸೊ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ‘ ನಾವು ನಿರೀಕ್ಷಿಸಿದ ಮಟ್ಟದಲ್ಲಿ ಮೇಲಿಂದ ನೀರು ಹರಿದು ಬರ್ತಿಲ್ಲ. ಭತ್ತ ನಾಟಿ ಮಾಡಲು ಜುಲೈ 15 ರ ವರೆಗೂ ಟೈಂ ಇದೆ.
ಹಾಗಾಗಿ ನಾವು ನಿರೀಕ್ಷೆ ಇಟ್ಟುಕೊಳ್ಳೋಣ. ಮಳೆ ಬಂದು ಡ್ಯಾಂ ನೀರಿನ ಮಟ್ಟ 110 ಕ್ಕೆ ಏರಿದ್ರೆ ಸಮಸ್ಯೆ ಇರುವುದಿಲ್ಲ. ಆದರೆ ಈಗ ರೈತರು ಕೆರೆ ಕಟ್ಟೆ ತುಂಬಿಸಿಕೊಳ್ಳಲು ನೀರು ಕೇಳುತ್ತಿದ್ದಾರೆ. ಹಾಗಾಗಿ ಶೀಘ್ರವಾಗಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.