ಮಂಗಳೂರು: ಮಂಗಳೂರು (Mangaluru) ನಗರಕ್ಕೆ ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ (Water Supply) ವ್ಯತ್ಯಯವಾಗಲಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ (Mangaluru Municipal Corporation) ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಏಪ್ರಿಲ್ 27ರ ಬೆಳಗ್ಗೆ 6 ಗಂಟೆಯಿಂದ 29ರ ಬೆಳಗ್ಗಿನ 6 ಗಂಟೆಯವರೆಗೆ 48 ಗಂಟೆಗಳ ಕಾಲ ನೀರು ಪೂರೈಕೆ ಸ್ಥಗಿತವಾಗಲಿದೆ.
ತುಂಬೆ ಅಣೆಕಟ್ಟಿನ ಪಂಪಿಂಗ್ ಸ್ಟೇಷನ್ನಲ್ಲಿ ನಿರ್ವಹಣಾ ಕಾರ್ಯಗಳನ್ನು ಸುಗಮಗೊಳಿಸುವುದರಿಂದ ನೀರು ಸರಬರಾಜು ಸ್ಥಗಿತಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ಎಂದು ಮಂಗಳೂರು ಮಹಾನಗರ ಪಾಲಿಕೆ ಮನವಿ ಮಾಡಿಕೊಂಡಿದೆ.