ರಾಯಚೂರು : ಕೃಷ್ಣ ನದಿಯಲ್ಲಿ ನೀರಿನ ಹೊರ ಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಗೂಗಲ್ ಗ್ರಾಮದ ಐತಿಹಾಸಿಕ ಅಲ್ಲಮಪ್ರಭು ದೇವಸ್ಥಾನವನ್ನು ಕೃಷ್ಣ ನೀರು ಸುತ್ತುವರೆದಿದೆ. ಗರ್ಭಗುಡಿಯಲ್ಲಿ ಹೆಚ್ಚು ನೀರು ಬಸಿಯುತ್ತಿದೆ.
ಹೌದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಬಳಿ ಇರುವ ಬ್ರಿಜ್ ಕಮ್ ಬ್ಯಾರೇಜ್ ಬಳಿ ಇರುವ ದೇವಸ್ಥಾನವನ್ನು ಕೃಷ್ಣ ನೀರು ಸುತ್ತುವರೆದಿದೆ ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ 25 ಗೇಟ್ ಗಳ ಮೂಲಕ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದ ಹಿನ್ನಲೆ ದೇವಸ್ಥಾನ ಸುತ್ತುವರೆದಿದೆ ನೀರು.
ಅಲ್ಲಮ ಪ್ರಭು ದೇವಸ್ಥಾನದ ಒಳಗೆ ಗುಹೆಯಂತಿರುವ ಗರ್ಭಗುಡಿಯಲ್ಲಿ ನೀರು ಬಸಿಯುತ್ತಿದೆ. ಗರ್ಭಗುಡಿಯಿಂದ ನೀರು ಹೊರ ಹಾಕಲು ಅರ್ಚಕರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಂಪ್ ಸೆಟ್ ಗಳನ್ನು ಹಚ್ಚಿ ಗರ್ಭಗುಡಿಯಿಂದ ನೀರು ಆಚೆ ಹಾಕುಲಾಗುತ್ತಿದೆ. ಇನ್ನೂ ನದಿಯಲ್ಲಿ ನೀರಿನ ಹೊರ ಹರಿವು ಅಲ್ಪ ಪ್ರಮಾಣದಲ್ಲಿ ಹೆಚ್ಚಾದರೂ ದೇವಸ್ಥಾನಕ್ಕೆ ಹೋಗಲು ಭಕ್ತರಿಗೆ ನಿರ್ಬಂಧ ಸಾಧ್ಯತೆಯಿದೆ ಎನ್ನಲಾಗುತ್ತಿದೆ.