ವಯನಾಡ್: ಕೇರಳದ ವಯನಾಡಿನಲ್ಲಿ ಭೀಕರ ಭೂಕುಸಿತ ಆಗಿದ್ದು , ರಕ್ಷಣಾ ಕಾರ್ಯಾಚರಣೆಗಾಗಿ ಕೇರಳ ಸರ್ಕಾರ ಮಂಗಳವಾರ ಭಾರತೀಯ ಸೇನೆಯ ನೆರವು ಕೋರಿದೆ . ಇದರ ಬೆನ್ನಲ್ಲೇ, ಭಾರತೀಯ ಸೇನೆ, NDRF ತಂಡಗಳು, ಎರಡು ಸೇನಾ ಹೆಲಿಕಾಪ್ಟರ್ಗಳು ಮತ್ತು ಇತರ ರಕ್ಷಣಾ ತಂಡಗಳು ಮುಂಡಕ್ಕೈಗೆ ತೆರಳುತ್ತಿವೆ.
ಕೇರಳದ ಗುಡ್ಡಗಾಡು ಪ್ರದೇಶವಾದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಿಂದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
122 ಇನ್ಫೆಂಟ್ರಿ ಬೆಟಾಲಿಯನ್(ಟಿಎ) ಮದ್ರಾಸ್ನಿಂದ ಸೆಕೆಂಡ್-ಇನ್-ಕಮಾಂಡ್ ನೇತೃತ್ವದ 43 ಸೇನಾ ಸಿಬ್ಬಂದಿಗಳ ತಂಡ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ತೆರಳುತ್ತಿದೆ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.