ನವದೆಹಲಿ: ಮಣಿಪುರದ ಜನಾಂಗೀಯ ಗಲಭೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ವಿಷಯದಲ್ಲಿ ಪ್ರತಿಪಕ್ಷ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ವಾಗ್ದಾಳಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮಣಿಪುರ ಹೊತ್ತಿ ಉರಿದಿತ್ತು.
ನೂರಾರು ಹತ್ಯೆಗಳು ನಡೆದಿದ್ದವು. ಆದರೆ ಅಂದಿನ ಪ್ರಧಾನಿ ಸದನದಲ್ಲಿ ತುಟಿಬಿಚ್ಚಲಿಲ್ಲ ಎಂದು ಕಿಡಿಕಾರಿದ್ದಾರೆ. ಮಣಿಪುರ ಗಲಭೆಯ ಸೂಕ್ಷ್ಮತೆಯ ಬಗ್ಗೆ ಚರ್ಚೆ ಮಾಡಲು ನಾವು ಯಾವಾಗಲೂ ಸಿದ್ಧರಿದ್ದೇವೆ. ಮಣಿಪುರಕ್ಕೆ ಹೋದ ಎಲ್ಲಾ ಸಂಸದರು ಚರ್ಚೆಗೆ ಸದನಕ್ಕೆ ಬರುತ್ತಾರೆ ಎಂದು ಆಶಿಸುತ್ತೇವೆ. ಓಡಿಹೋಗದೇ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ ಎಂದು ಸಚಿವ ಅನುರಾಗ್ ಠಾಕೂರ್ ಸವಾಲು ಹಾಕಿದ್ದಾರೆ.