ಬೆಂಗಳೂರು: ಆಪರೇಷನ್ ಕಮಲವೇ ಬಿಜೆಪಿಗೆ ಮುಳುವಾಯ್ತು ಎಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ರವಿಕುಮಮಾರ್, ಅವರು ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪಕ್ಷಕ್ಕೆ ಬಂದ ಬಹಳಷ್ಟು ವಲಸಿಗರು ಗೆದ್ದಿದ್ದಾರೆ. ಎಲ್ಲರೂ ಒಟ್ಟಾಗಿ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ. ಕಾಂಗ್ರೆಸ್ನಿಂದ ಬಂದವರಿಂದಲೇ ನಾವು ಅಧಿಕಾರ ನಡೆಸಿದ್ದು, ಹೊರಗಿನವರು, ಒಳಗಿನವರು ಎಂಬ ಭೇದ ಇಲ್ಲ ಎಂದರು. ಬಿಜೆಪಿ ಸರ್ಕಾರ ಅವಧಿಯ ಯಾವುದೇ ವಿಚಾರ ತನಿಖೆ ಮಾಡಲಿ. ಯಾವುದಕ್ಕೂ ನಾವು ಸೊಪ್ಪು ಹಾಕುವುದಿಲ್ಲ, ಎದುರಿಸುತ್ತೇವೆ. ಸರ್ಕಾರದ ತನಿಖೆಗೆ ನಾವು ಹೆದರಲ್ಲ ಎಂದರು.
ಇದನ್ನು ಹೊರತುಪಡಿಸಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ಉದ್ದೇಶದಿಂದ ಸಭೆ ಮಾಡ್ತಿದೀವಿ
ಅದೇ ರೀತಿ ನಮ್ಮ ಕಾರ್ಯಕರ್ತರ ಸಂಕಲ್ಪ ಶಕ್ತಿಯಿಂದ ಎಲ್ಲಾ ಲೋಕಸಭೆ ಸ್ಥಾನಗಳನ್ನೂ ಗೆಲ್ತೇವೆ ಸಣ್ಣಪುಟ್ಟ ಗೊಂದಲಗಳಿವೆ, ಅದನ್ನೆಲ್ಲ ಸರಿಪಡಿಸಿಕೊಳ್ತೇವೆ ಗೊಂದಲಗಳು ಪಕ್ಷದಲ್ಲಿ ಇಲ್ಲ ಅಂತ ನಾನು ಹೇಳಲ್ಲ ಗೊಂದಲಗಳನ್ನು ಸರಿಪಡಿಸಲು ನಮ್ಮ ನಾಯಕರು ಬಹಿರಂಗವಾಗಿ ಮಾತಾಡ್ತಿದಾರೆ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಒಟ್ಟಾಗಿ ಸೇರಿ ಚರ್ಚೆ ಮಾಡಿ ಬಗೆಹರಿಸಿಕೊಳ್ತೇವೆ ಮತ್ತೊಮ್ಮೆ ರಾಜ್ಯದಲ್ಲಿ ಹೊಸ ಶಕ್ತಿ, ಹೊಸ ಚೈತನ್ಯವನ್ನು ಕಾರ್ಯಕರ್ತರಲ್ಲಿ ತುಂಬ್ತೇವೆ ಮತ್ತೆ ನಾವು ಗೆದ್ದೇಗೆಲ್ತೇವೆ ಎಂದು ಹೇಳಿದರು.