ಬೆಂಗಳೂರು:– ನಾವು ಗಂಡಸರನ್ನ ನಂಬಲ್ಲ, ಹಾಗಾಗಿ ಹೆಣ್ಮಕ್ಕಳಿಗೆ ಗ್ಯಾರಂಟಿ ಕೊಟ್ಟಿದ್ದೀವಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ
ಗ್ಯಾರಂಟಿ ಜಾರಿ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ 2,000 ರೂ. ಕೊಡುತ್ತೇವೆ. ಅವರು ಆ ದುಡ್ಡಲ್ಲಿ ಮನೆ ನಡೆಸುತ್ತಾರೆ. ನೀವಾಗಿದ್ದರೆ ಎಣ್ಣೆ ಅಂಗಡಿಗೆ ಹೋಗ್ತಿದ್ರಿ, ಅದಕ್ಕೆ ಹೆಣ್ಣುಮಕ್ಕಳಿಗೆ ಹಣ ಕೊಡುತ್ತಿದ್ದೇವೆ. ನಾವು ಐದು ಗ್ಯಾರಂಟಿಗಳನ್ನು ತಂದಿದ್ದೇವೆ. ಜನರಿಗಾಗಿ ಯೋಜನೆಗಳನ್ನು ಕೊಟ್ಟಿದ್ದೇವೆ. ತಮಿಳುನಾಡು ನೋಡಿ ಶಕ್ತಿ ಯೋಜನೆ ತಂದೆವು. 4,000 ಕೋಟಿ ಬಾರಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ ಯೋಜನೆ ಕೊಟ್ಟಿದ್ದೇವೆ ಎಂದರು
ಶಿವಮೊಗ್ಗ ಕಾರ್ಯಕ್ರಮ ನೋಡಿದ್ರೆ ಸೋಲು ಖಚಿತ. ಯಡಿಯೂರಪ್ಪ ಪುತ್ರ ರಾಘವೇಂದ್ರ ಗೆಲ್ಲಲ್ಲ. ಈಗ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ತಲುಪದಿದ್ದರೆ ತಲುಪಿಸುವ ಕೆಲಸ ಮಾಡಬೇಕು. ರಾಜ್ಯ ಮಟ್ಟದಲ್ಲಿ ಐವರನ್ನ ನೇಮಿಸಿದ್ದೇವೆ. 50,000 ವೇತನವನ್ನೂ ಕೊಡುತ್ತೇವೆ. ಜಿಲ್ಲಾಮಟ್ಟದಲ್ಲಿ ಸಮಿತಿ ರಚನೆಯಾಗಲಿವೆ. ತಾಲೂಕು ಮಟ್ಟದಲ್ಲಿ ಸಮಿತಿ ರಚನೆಯಾಗಿದೆ. 15,000 ಸದಸ್ಯರನ್ನು ನೇಮಿಸಿದ್ದೇವೆ. ಕಾರ್ಡ್ ಇಟ್ಟುಕೊಂಡು ವಿಧಾನಸೌಧಕ್ಕೆ ಬರಬಹುದು. ಕಾರ್ಡ್ ಮಿಸ್ಯೂಸ್ ಆಗಬಾರದು. ಕೆಟ್ಟ ಹೆಸರು ತಂದರೆ ವಜಾ ಮಾಡುತ್ತೇವೆ. ನೀವು ಜನರ ಸೇವೆ ಮಾಡಬೇಕು. ಯಾವ ರಾಜ್ಯದಲ್ಲೂ ಕಾರ್ಯಕರ್ತರಿಗೆ ಶಕ್ತಿ ತುಂಬಿಲ್ಲ. ನಾವು ಕಾರ್ಯಕರ್ತರಿಗೆ ಶಕ್ತಿ ತುಂಬಿದ್ದೇವೆ ಎಂದು ಹೇಳಿದರು