ಬೆಂಗಳೂರು: ಗ್ಯಾರಂಟಿ ಯೋಜನೆಯನ್ನೂ ಜಾರಿ ಮಾಡಿದ್ದೇವೆ, ಇದೆಲ್ಲ ಅಭಿವೃದ್ಧಿ ಅಲ್ಲವೇ? ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನೆ ಮಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯನ್ನೂ ಜಾರಿ ಮಾಡಿದ್ದೇವೆ.
ಇದೆಲ್ಲ ಅಭಿವೃದ್ಧಿ ಅಲ್ಲವೇ? ಗ್ಯಾರಂಟಿಗಳಿಗೆ ನಮಗೆ ಎಷ್ಟು ಹಣ ಕೊರತೆ ಆಗಬಹುದು ಅಂತ ನಾವು ಹೈಕಮಾಂಡ್ ನಾಯಕರಿಗೂ, ಸಿದ್ದರಾಮಯ್ಯ ಅವರಿಗೆ ಮೊದಲೇ ಹೇಳಿದ್ದೆವು.
ಎಷ್ಟು ಅನುದಾನ ಕಡಿಮೆ ಬರಬಹುದು ಅಂತ ಹೇಳಿದ್ದೆವು. ಹಳೆ ಬಿಜೆಪಿ ಸರ್ಕಾರದ ಬ್ಯಾಕ್ ಲ್ಯಾಗ್ ಹಣದಿಂದ ನಮಗೆ ಸಮಸ್ಯೆ ಆಗಿದೆ. ಶಾಸಕರ ಅಳಲನ್ನು ಪಕ್ಷದ ಸಭೆಯಲ್ಲಿ ನಾನು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಬಳಿ ಇದರ ಬಗ್ಗೆ ಚರ್ಚೆ ಮಾಡುತ್ತೇನೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 1250 ಕೋಟಿ ರೂ. ಹಣ ಕೊಟ್ಟಿದ್ದೇವೆ.ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಆಗುತ್ತಿದೆ ಎಂದು ಹೇಳಿದರು.
ಸರ್ಕಾರದ ಭವಿಷ್ಯದ ಬಗ್ಗೆ ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇನ್ನು ಅದ್ಬುತವಾಗಿ ಸರ್ಕಾರ ಆಗಬಹುದು ಅಂತ ಪರಮೇಶ್ವರ್ ಹೇಳಿರಬಹುದು ಅಂತ ಅನಿಸುತ್ತಿದೆ. ಗ್ಯಾರಂಟಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಉತ್ತಮವಾಗುತ್ತದೆ ಅಂತ ಹೇಳಿರಬಹುದು. ಮಾಧ್ಯಮಗಳಿಗೆ ಅದು ಸರ್ಕಾರದ ವಿರುದ್ದ ಮಾತಾಡಿರಬಹುದು ಅನ್ನಿಸಬಹುದು.ಕಾಂಗ್ರೆಸ್ ಭವನ ಬೇಗ ಕಟ್ಟಿ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಕೆಲಸ ಮಾಡೋಕೆ ಒಳ್ಳೆಯದು ಆಗುತ್ತೆ ಅಂತ ಅವರು ನನಗೂ ಹೇಳಿದ್ದಾರೆ ಎಂದು ಪರಮೇಶ್ವರ್ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡರು.