ಮೈಸೂರು: ನಾವು ನುಡಿದಂತೆ ನಡೆಯುತ್ತಿದ್ದೇವೆ. ನಾವು ಹೇಳಿದಂತೆ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದೇವೆ. ನಾವು ಬಿಜೆಪಿಯವರಂತೆ ವಚನ ಭ್ರಷ್ಟರಲ್ಲ. ಅನ್ನಭಾಗ್ಯ ಯೋಜನೆಯಡಿ ಜು.1ರಿಂದ ಉಚಿತವಾಗಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು. ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತವಾಗಿ 10 ಕೆಜಿ ಅಕ್ಕಿ ನೀಡುತ್ತೇವೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದರು.
ಎಲ್ಲರಿಗೂ 200 ಯುನಿಟ್ ಉಚಿತ ವಿದ್ಯುತ್ ಕೊಡುವಂತೆ ಬೇಡಿಕೆ ಇಡುತ್ತಿದ್ದಾರೆ. ಒಂದು ವರ್ಷದಲ್ಲಿ 100 ಯೂನಿಟ್ ಬಳಸುವವರಿಗೆ 200 ಯೂನಿಟ್ ಯಾಕೆ ಕೊಡಬೇಕು? ಇದು ದುರುಪಯೋಗ ಅಲ್ವಾ? ಅಂತಾ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರು 190, 180, 70 ಯುನಿಟ್ ಬಳಸುತ್ತಾರ) ಅವರಿಗೆ ಫ್ರೀ. ಅದಕ್ಕೆ ಒಂದು ವರ್ಷದ ಆವೇರೆಜ್ ತೆಗೆದುಕೊಳ್ಳಲು ಹೇಳಿದ್ದೇನೆ. ಅದರಲ್ಲಿ ಶೇ 10 ಹೆಚ್ಚುವರಿ ನೀಡುತ್ತೇವೆ. ಯಾರು 200 ಯೂನಿಟ್ ಬಳಸುತ್ತಾರೋ ಅಂತಹವರೆಲ್ಲರಿಗೂ ಉಚಿತ ಎಂದರು.