ಟೆಲ್ ಅವಿವ್: ಇಸ್ರೇಲ್ (Israel) ಹಾಗೂ ಪ್ಯಾಲೆಸ್ತೀನ್ (Palestine) ನಡುವಿನ ಯುದ್ಧ ಮುಂದುವರಿದಿದ್ದು, ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯಲ್ಲ. ಗೆಲುವಿನ ತನಕ ವಿರಮಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಪ್ರತಿಜ್ಞೆ ಮಾಡಿದ್ದಾರೆ.
ಹಮಾಸ್ (Hamas Terrorists) ಬಂಡುಕೋರರು ಒತ್ತಯಾಳಾಗಿಟ್ಟುಕೊಂಡವರಲ್ಲಿ ಇಬ್ಬರನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಗೆಲುವಿನ ಕಡೆಯ ಕ್ಷಣದ ವರೆಗೂ ಹೋರಾಟ ನಡೆಸುತ್ತೇವೆ. ಬಾಂಬ್ ದಾಳಿಯಲ್ಲಿ ಯಾವುದೇ ವಿರಾಮವಿಲ್ಲ ಎಂದು ತಿಳಿಸಿದ್ದಾರೆ.
ಹಮಾಸ್ ವಿರುದ್ಧದ ಹೋರಾಟಕ್ಕೆ 14ನೇ ದಿನ ತುಂಬಿದೆ. ಗಾಜಾದ ಆರೋಗ್ಯ ಸಚಿವಾಲಯದಿಂದ ಮಾಹಿತಿಗಳ ಪ್ರಕಾರ ಈವರೆಗೂ 4,137 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ, 13,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್ನಲ್ಲಿ 1,400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಆಕ್ರಮಣದ ಸಮಯದಲ್ಲಿ ಹಮಾಸ್ 203 ಜನರನ್ನು ಒತ್ತೆಯಾಳಾಗಿರಿಸಿಕೊಂಡಿದೆ. ಅವರನ್ನು ಬಿಡುಗಡೆ ಮಾಡುವವರೆಗೂ ನಾವು ದಾಳಿ ಮುಂದುವರಿಸುತ್ತೇನೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.