ಬೆಂಗಳೂರು: ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ ಬದಲು ಹಣ ಹಾಕುವ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕೊಟ್ಟ ಮಾತಿನಂತೆ ಅಕ್ಕಿ ಸಿಗುವವರೆಗೂ ಹಣ ಕೊಡುತ್ತೇವೆ ಎಂದರು.
ಸಿಎಂ, ಆಹಾರ ಸಚಿವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಶೇಕಡಾ 80ರಿಂದ 85ರಷ್ಟು ಕಾರ್ಡ್ದಾರರ ಖಾತೆಗೆ ಆಧಾರ್ ಲಿಂಕ್ ಆಗಿದೆ.
ಶೇಕಡಾ 15-20ರಷ್ಟು ಕಾರ್ಡ್ದಾರರ ಅಕೌಂಟ್ ಟ್ರೇಸ್ ಆಗಬೇಕು. ಆಧಾರ್ ಲಿಂಕ್ ಖಾತೆಗೆ ಹಣ ಕೊಡಿ ಎಂದರೆ ಹಾಕುತ್ತೇವೆ. ಬಿಜೆಪಿ ಸಲಹೆಯನ್ನೂ ಪರಿಗಣಿಸಿ ಈ ತೀರ್ಮಾನ ಮಾಡಿದ್ದೇವೆ ಎಂದರು.
ಏಕ ರೂಪ ನಾಗರಿಕತೆ ಜಾರಿ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ರಾಷ್ಟ್ರೀಯ ಪಕ್ಷ ಅದರ ಬಗ್ಗೆ ಅಭಿಪ್ರಾಯ ತಿಳಿಸುತ್ತದೆ. ನಾವು ಬದುಕುತ್ತಿದ್ದೇವೆ. ನಮ್ಮ ಪಾರ್ಟಿ ಒಂದೊಂದು ಇಂಚು ತಿಳಿಸುತ್ತದೆ. ಅದರ ಬಗ್ಗೆ ಪ್ರತಿಕ್ರಿಯೆ ಕೊಡಲ್ಲ. ಇದು ನನ್ನ ಸ್ಟ್ಯಾಂಡ್ ಎಂದರು.