ಮೈಸೂರು: ಹಾವುಗಳು ಅಲ್ಲಿ…ಇಲ್ಲಿ ಅವಿತುಕೊಳ್ಳೋದನ್ನ ನೋಡಿದ್ದೀವಿ..ಹೆಲ್ಮೆಟ್ ಧರಿಸಿದ್ದನ್ನು ಎಲ್ಲಾದರೂ ನೋಡಿದ್ಷೀರಾ…ಹೌದು ಸಾಂಸ್ಕೃತಿಕ ನಗರಿಯಲ್ಲಿ ನಾಗಪ್ಪ ಹೆಲ್ಮೆಟ್ ಧರಿಸಿ ಬೈಕ್ ಓಡಿಸೋಕೆ ತಯಾರಿ ಮಾಡಿದ್ದ…ಅಷ್ಟರಲ್ಲಿ ಉರಗಮಿತ್ರ ಸ್ನೇಕ್ ಶ್ಯಾಮ್ ನಾಗಪ್ಪನನ್ನ ಜೋಪಾನವಾಗಿ ಹೆಲ್ಮೆಟ್ ನಿಂದ ಮುಕ್ತಿಗೊಳಿಸಿದರು. ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಕಚೇರಿ ಮುಂದೆ ಬೈಕ್ ನಿಲ್ಲಿಸಿ, ಬೈಕ್ ನಲ್ಲೆ ಹೆಲ್ಮೆಟ್ ಗ್ಲಾಸ್ ನ್ನು ಅರ್ಧದಷ್ಟು ಓಪೆನ್ ಮಾಡಿ ಇಟ್ಟಿದ್ದರು.
ಅದು ಎಲ್ಲಿತ್ರೋ ನಾಗರಹಾವು ಓಡಿ ಬಂದು ಹೆಲ್ಮೆಟ್ ಒಳಗೆ ಸೇರಿಕೊಳ್ಳಬೇಕೆ..ಇನ್ನು ಹೆಲ್ಮೆಟ್ ಒಳಗಿಂದಲೇ ಜನರ ನೋಡಿ ಹೆಡೆ ಬಿಚ್ಚಿದ್ದ ನಾಗಪ್ಲನನ್ನು ನೋಡಿ ಬೈಕ್ ಸವಾರ ದಂಗಾಗಿ ಹೋದ. ತಕ್ಷಣ ಸ್ನೇಕ್ ಶ್ಯಾಮ್ ಕರೆ ಮಾಡಿದ್ದರು. ತಕ್ಚಣವೇ ಬಂದ ಸ್ನೇಕ್ ಶ್ಯಾಮ್ ನಾಗಪ್ಪನ ಅವತಾರ ನೋಡಿ ಆಶ್ಚರ್ಯ ಗೊಂಡರು. ಹೆಲ್ಮೆಟ್ ಗಳನ್ನು ಓಪೆನ್ ಮಾಡಿ ಇಡಬೇಡಿ. ಹಾಗೆ ಇಟ್ಟರೆ ಇಂತಹ ಅಚಾತೂರ್ಯಗಳಾಗುತ್ತೆ ಅಂತಾ ಬುದ್ದಿವಾದ ಹೇಳಿ, ನಾಗರಹಾವನ್ನು ತಮ್ಮ ಬುಟ್ಟಿಗೆ ಹಾಕಿಕೊಂಡು ಸ್ಥಳದಲ್ಲಿದ್ದವರನ್ನು ನಿರಾಳ ಮಾಡಿದರು.