ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಾಲಿಂಗಪುರದಲ್ಲಿ ಪಕ್ಷೇತರ ಅಭ್ಯರ್ಥಿ ಅಂಬಾದಾಸ್ ಕಾಮೂರ್ತಿ ಭರ್ಜರಿ ರೋಡ್ ಶೋ ಮತ್ತು ನಗರದಲ್ಲಿ ಅಬ್ಬರ ಪ್ರಚಾರ. ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ನೇಕಾರರ ಮತಗಳು ನಿರ್ಣಾಯಕ.
ಈ ಬಾರಿ ಮತದಾರರು ಬದಲಾವಣೆ ಬಯಸಿದ್ದಾರೆ. ನೇಕಾರ ಸಮುದಾಯದ ಟ್ರಕ್ ಚಿಹ್ನೆಯ ಪಕ್ಷೇತರ ಅಭ್ಯರ್ಥಿ ಅಂಬಾದಾಸ್ ಕಾಮೂರ್ತಿಯವರನ್ನು ಗೆಲ್ಲಿಸಿ ಕೊಡುವುದು ಶತಸಿದ್ಧ ಎಂದು ಹೇಳಿದರು.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ನೇಕಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಈ ಬಾರಿ ಎರಡು ಪಕ್ಷಕ್ಕೆ ಬುದ್ಧಿ ಕಲಿಸುತ್ತೇವೆ.ತೇರದಾಳ ಮತಕ್ಷೇತ್ರದ ಮತದಾರರು ಸ್ವಾಭಿಮಾನ ಮತದಾರರು. ಈ ಬಾರಿ ನಮಗೆಆದ ಅನ್ಯಾಯವನ್ನ ಸಹಿಸಿಕೊಳ್ಳುವುದಿಲ್ಲ.ನಮ್ಮ ಸಮುದಾಯದ ಪಕ್ಷೇತರ ಅಭ್ಯರ್ಥಿ ಅಂಬಾದಾಸ ಕಾಮೂರ್ತಿಗೆ ಆಶೀರ್ವಾದ ಮಾಡಿ ವಿಧಾನಸೌಧಕ್ಕೆ ಕಳಿಸಿಕೊಡುತ್ತೇವೆ ಎಂದು ಹೇಳಿದರು.
ತೇರದಾಳ ಕ್ಷೇತ್ರದಲ್ಲಿ ನನ್ನ ಗೆಲವು ಶತಸಿದ್ಧ. ಕ್ಷೇತ್ರದ ತುಂಬಾ ಓಡಾಡಿದ್ದೇನೆ ಮತ್ತು ಮನೆಮನೆಗೆ ಭೇಟಿ ನೀಡಿ ಮತ ಭಿಕ್ಷೆಯನ್ನು ಕೇಳಿದ್ದೇನೆ. ಎಲ್ಲ ಮತದಾರ ಒಂದೇ ಉತ್ತರ ನೂರಕ್ಕೆ ನೂರರಷ್ಟು ನಿಮಗೆ ನಾವು ಆಶೀರ್ವಾದ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ ನನ್ನ ಗೆಲುವು ಶತಸಿದ್ಧ ಎಂದು ಪಕ್ಷೇತರ ಅಭ್ಯರ್ಥಿ ಅಂಬಾದಾಸ್ ಕಾಮೂರ್ತಿ ಹೇಳಿದರು.
ವರದಿ: ಪ್ರಕಾಶ ಕುಂಬಾರ, ಬಾಗಲಕೋಟೆ