ಬೆಂಗಳೂರು:- ಇಂದು ಕ್ರಿಸ್ಮಸ್ ಹಬ್ಬ ಹಿನ್ನೆಲೆ, ಬೆಂಗಳೂರಿನ ಎಂಜಿ ರಸ್ತೆ, ಟ್ರಿನಿಟಿ, ಬ್ರಿಗೆಡ್ ರಸ್ತೆ, ಕೋರಮಂಗಲ ಹೀಗೆ ಪ್ರಮುಖ ಏರಿಯಾಗಳಲ್ಲಿ ಸಂಭ್ರಮ ಕಳೆಗಟ್ಟಿದೆ.
ಚರ್ಚ್ಗಳಲ್ಲಿ ಮದ್ಯರಾತ್ರಿಯಿಂದಲೇ ಯೇಸುವಿನ ಪ್ರಾರ್ಥನೆ ಆರಂಭವಾಗಿದೆ. ಇದರೊಂದಿಗೆ ಮಾಲ್ಗಳು ಕೂಡ ಕ್ರಿಸ್ಮಸ್ ಹಬ್ಬವಾಗಿ ಮದುಮಣಗಿತ್ತಿಯಂತೆ ಸಿಂಗರಿಸಿಕೊಂಡು ಗ್ರಾಹಕರನ್ನು ಸೆಳೆಯುತ್ತಿದೆ.
ಬೆಂಗಳೂರು ಚರ್ಚ್ಗಳಿಗೆ ಪ್ರಸಿದ್ಧಿ ಪಡೆದಿದೆ. ಶತಶತಮಾನಗಳ ಚರ್ಚ್ಗಳು ಇಲ್ಲಿದೆ. ಕ್ರಿಸ್ಮಸ್ ಹಬ್ಬದಂದು ಬೆಂಗಳೂರಿನ ಪ್ರಸಿದ್ಧ 5 ಚರ್ಚ್ಗಳ ಪರಿಚಯ ತಿಳಿಯಿರಿ. ಈ ಚರ್ಚ್ಗಳು ಐತಿಹಾಸಿಕ ಮಹತ್ವವನ್ನು ಹೊಂದಿವೆ. ಅವುಗಳ ರಚನೆ, ವಿನ್ಯಾಸ ಆಕರ್ಷಿಸಿದೆ ಇರದು.
ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್ 17ನೆ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಬಸ್ ನಿಲ್ದಾಣಕ್ಕೆ ಸಮೀಪದಲ್ಲಿದ್ದು, ಬೆಂಗಳೂರಿಗೆ ಆಗಮಿಸುವ ಪ್ರವಾಸಿಗರು ಈ ಚರ್ಚ್ ನೋಡದೆ ಮರಳುವುದಿಲ್ಲ. ಗೋಥಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಈ ಚರ್ಚ್ನ ವಾಸ್ತು ಶಿಲ್ಪ ಮನಮೋಹಕವಾಗಿದೆ. ವಿದ್ಯುತ್ ದೀಪಗಳಿಂದ ಅಲಂಕೃತವಾಗಿರುವ ಈ ಚರ್ಚ್ನಲ್ಲಿ ಭಾನುವಾರ ಸಂಜೆಯಿಂದಲೇ ಜನ ಜಂಗುಳಿ ನೆರೆದಿತ್ತು. ಯೇಸುವಿನ ಜೀವನ ಬಿಂಬಿಸುವ ಗೋದಲಿ ಪ್ರದರ್ಶನವನ್ನು ಸಾವಿರಾರು ಮಂದಿ ವೀಕ್ಷಿಸಿದರು.
ಬೆಂಗಳೂರಿನಲ್ಲಿರುವ ಅತ್ಯಂತ ಪುರಾತನ ಕ್ಯಾಥೋಲಿಕ್ ಚರ್ಚ್ಗಳಲ್ಲಿ ಸೇಂಟ್ ಪ್ಯಾಟ್ರಿಕ್ ಚರ್ಚ್ ಸಹ ಒಂದು. ಇದು ಬ್ರಿಗೇಡ್ ರಸ್ತೆಯಲ್ಲಿದೆ. 1844ರಲ್ಲಿ ನಿರ್ಮಿಸಲಾದ ಈ ಐತಿಹಾಸಿಕ ಕಟ್ಟಡ ವಿಶಿಷ್ಟ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಅದರ ಕಮಾನಿನ ಪ್ರವೇಶದ್ವಾರ ಮತ್ತು ಕ್ರಿಸ್ತನ ಅಪೊಸ್ತಲರನ್ನು ಸಂಕೇತಿಸುವ ಹನ್ನೆರಡು ಸ್ತಂಭಗಳು ಬೆರಗು ಮೂಡಿಸುತ್ತವೆ. ಚರ್ಚ್ನ ಬಲಭಾಗದಲ್ಲಿ ಸೇಂಟ್ ಆಂಥೋನಿಗೆ ಅರ್ಪಿತವಾದ ದೇವಾಲಯವಿದೆ. ಈ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಸಮಸ್ಯೆಗಳಿಂದ ಮುಕ್ತರಾಗಬಹುದು ಎಂದು ನಂಬಲಾಗಿದೆ.
ಮಾಲ್ಗಳು, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಕಮರ್ಷಿಯಲ್ ಸ್ಟ್ರೀಟ್ಗಳಿಗೂ ಕ್ರಿಸ್ಮಸ್ಗೂ ಅವಿನಾಭಾವ ಸಂಬಂಧ. ಡಿಸೆಂಬರ್ ತಿಂಗಳಲ್ಲಿ ವಿಶೇಷವಾಗಿ ಅಲಂಕೃತಗೊಂಡು ಗ್ರಾಹಕರನ್ನು ಆಕರ್ಷಿಸುತ್ತವೆ. ಒರಾಯನ್ ಮಾಲ್ನಲ್ಲಿ 85 ಅಡಿ ಎತ್ತರದ ಕ್ರಿಸ್ಮಸ್ ಟ್ರೀ ನಿರ್ಮಿಸಲಾಗಿದ್ದು ಪ್ರಮುಖ ಆಕರ್ಷಣೆಯಾಗಿದೆ. ನೆಕ್ಸಸ್ ಮಾಲ್ನಲ್ಲಿ 40 ಅಡಿ ಎತ್ತರದ ಕ್ರಿಸ್ಮಸ್ ಟ್ರೀ ಗಮನ ಸೆಳೆಯುತ್ತದೆ. ಫೀನಿಕ್ಸ್ ಮಾಲ್ನಲ್ಲಿ 100 ಅಡಿ ಎತ್ತರದ ಕ್ರಿಸ್ಮಸ್ ಟ್ರೀ ಸ್ಥಾಪಿಸಲಾಗಿದೆ.
ಇನ್ನು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಮತ್ತು ಕಮರ್ಷಿಯಲ್ ಸ್ಟ್ರೀಟ್ಗಳನ್ನು ಸಂಜೆಯ ನಂತರ ನೋಡುವುದೇ ಒಂದು ಚೆಂದ. ಜಗಮಗಿಸುವ ವಿದ್ಯುತ್ ದೀಪಗಳು ಸ್ವಾಗತ ಕೋರುತ್ತವೆ