ಶೇಂಗಾ ಬೀಜಗಳು ಅಥವಾ ಕಡಲೆ ಬೀಜಗಳು ಎಂದರೆ ಎಲ್ಲರಿಗೂ ಪ್ರಿಯ. ಬಡವರ ಬಾದಾಮಿ ಎಂದು ಕೂಡ ಇವುಗಳನ್ನು ಕರೆಯಲಾಗುತ್ತದೆ. ನಾವೆ ಲ್ಲರೂ ಇಷ್ಟಪಟ್ಟು ಕಡಲೆ ಬೀಜಗಳ ಉತ್ಪನ್ನಗಳನ್ನು ಸವಿಯುತ್ತೇವೆ
ನಮ್ಮ ಆರೋಗ್ಯಕ್ಕೆ ಪ್ರೋಟೀನ್ ಬಹಳ ಮುಖ್ಯ. ಇದರಿಂದ ನಮ್ಮ ಮಾಂಸ ಖಂಡಗಳ ಬೆಳವಣಿಗೆ ಮತ್ತು ಮಾಂಸ ಖಂಡ ಗಳಿಗೆ ಯಾವುದೇ ತೊಂದರೆ ಎದುರಾಗಿದ್ದರೆ ಅದನ್ನು ಸರಿ ಪಡಿಸಲು ಪ್ರೋಟಿನ್ ಅಂಶ ಸಹಾಯವಾಗುತ್ತದೆ. ಮನುಷ್ಯನ ದೈಹಿಕ ಬೆಳವಣಿಗೆ ಕೂಡ ಕಡಲೆ ಬೀಜಗಳಲ್ಲಿ ಸಿಗುವ ಪ್ರೋಟಿನ್ ಅಂಶಗಳಿಂದ ಸಾಧ್ಯವಿದೆ.