ನಾವಿಡುವ ಪ್ರತಿ ಹೆಜ್ಜೆಯೂ ನಮ್ಮನ್ನು ಆರೋಗ್ಯಕರ ದೇಹ ಮತ್ತು ಮನಸ್ಸಿನ ಕಡೆಗೆ ಚಲಿಸಲು ಸಹಾಯ ಮಾಡುತ್ತದೆ. ತಂತ್ರಜ್ಞಾನವು ನಮ್ಮ ಜಗತ್ತನ್ನು ಆಕ್ರಮಿಸಿಕೊಂಡಿರುವುದರಿಂದ ಮತ್ತು ಎಲ್ಲವೂ ಮನೆ ಬಾಗಿಲಲ್ಲಿ ಲಭ್ಯವಿರುವುದರಿಂದ ನಾವು ನಡೆಯುವುದೇ ಕಡಿಮೆಯಾಗಿದೆ. ಇದರಿಂದ ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಕೀಲು ನೋವುಗಳಂತಹ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ.
ನೀವು ದಿನವೂ ಎಷ್ಟು ಸಮಯ ವಾಕ್ ಮಾಡಬೇಕೆಂಬುದನ್ನು ಮೊದಲೇ ನಿರ್ಧರಿಸಿಕೊಳ್ಳಿ. ದಿನವೂ ನಿಮ್ಮ ನಡಿಗೆಯ ಸಮಯವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಿ. ಇದರಿಂದ ನಿಮ್ಮ ದೇಹ ವಾಕಿಂಗ್ಗೆ ಹೊಂದಿಕೊಳ್ಳಲು ಸಹಾಯಕವಾಗುತ್ತದೆ.
ನಿಮ್ಮ ದೈನಂದಿನ ದಿನಚರಿಯಲ್ಲಿ ಆಗಾಗ ಸ್ವಲ್ಪ ಸ್ವಲ್ಪ ನಡೆಯುವುದನ್ನು ರೂಢಿಸಿಕೊಳ್ಳಿ. ದೀರ್ಘ ಕಾಲದವರೆಗೆ ಕುಳಿತಿರುವುದರ ಬದಲು ಆಚೀಚೆ ಓಡಾಡುತ್ತಿರಿ.
ಪೆಡೋಮೀಟರ್ ಅಥವಾ ಫಿಟ್ನೆಸ್ ಟ್ರ್ಯಾಕರ್ ಮೂಲಕ ನೀವು ದಿನವೂ ಎಷ್ಟು ನಡೆದಿದ್ದೀರೆಂದು ಟ್ರ್ಯಾಕ್ ಮಾಡಿ. ಇದರಿಂದ ಮರುದಿನ ಹೆಚ್ಚು ನಡೆಯಲು ನಿಮಗೆ ಪ್ರೇರಣೆ ಸಿಗುತ್ತದೆ.
ವಾಕಿಂಗ್ಗೆ ಸಮಯ ಮೀಸಲಿಡಲು ಸಾಧ್ಯವಾಗದಿದ್ದರೆ ಫೋನ್ನಲ್ಲಿ ಮಾತನಾಡುವಾಗ ನಡೆಯುತ್ತಾ ಮಾತನಾಡಿ. ಮನೆಯಲ್ಲಾಗಲಿ ಅಥವಾ ಕೆಲಸದಲ್ಲಾಗಲಿ ಫೋನ್ನಲ್ಲಿರುವಾಗ ವೇಗವಾಗಿ ನಡೆಯಿರಿ.
ನಿಮ್ಮ ದೈನಂದಿನ ವೇಳಾಪಟ್ಟಿಯಲ್ಲಿ ವಾಕಿಂಗ್ಗೂ ಜಾಗವಿರಲಿ. ಬೆಳಗ್ಗೆ ಅಥವಾ ಸಂಜೆ ಅಥವಾ ಮಧ್ಯಾಹ್ನ ಊಟದ ಬಳಿಕ ವಾಕ್ ಮಾಡಲು ಮರೆಯದಿರಿ.