ಆರೋಗ್ಯದ ಬಗ್ಗೆ ಮತ್ತು ಅದನ್ನು ಹೇಗೆ ಕಾಪಾಡಿಕೊಂಡು ಹೋಗಬೇಕು ಎನ್ನುವ ಬಗ್ಗೆ ಇಂಟರ್ನೆಟ್ ನಲ್ಲಿ ಸಾವಿರಾರು ಮಾಹಿತಿಗಳು ಸಿಗುವುದು ಸಹಜ. ಆದರೆ ಯಾವುದನ್ನು ಹೇಗೆ ಬಳಕೆ ಮಾಡಬೇಕು ಎನ್ನುವ ಗೊಂದಲವು ಕೆಲವರಲ್ಲಿ ಇರುವುದು
ನಾವೆಲ್ಲರೂ ಬ್ಲ್ಯಾಕ್ ಕಾಫಿ ಬಗ್ಗೆ ಕೇಳಿದ್ದೇವೆ. ಕೆಲವರು ಇದನ್ನು ಕುಡಿದಿರುವರು. ನಿತ್ಯವೂ ಇದನ್ನು ಕುಡಿಯುವವರು ಇದ್ದಾರೆ. ಬ್ಲ್ಯಾಕ್ ಕಾಫಿ ಬಳಸಿಕೊಂಡು ದೇಹದ ತೂಕ ಇಳಿಸಬಹುದು. ಇದು ನಿಮಗೆ ಅಚ್ಚರಿ ಮೂಡಿಸಿದರೂ ನಿಜವಾದ ವಿಚಾರ, ಅದು ಹೇಗೆ ಎಂದು ತಿಳಿಯಿರಿ.
- ತೂಕ ಇಳಿಸಲು ನೆರವಾಗುವಂತಹ ಕ್ಲೋರೊಜೆನಿಕ್ ಆಮ್ಲವು ತೂಕ ಇಳಿಸಲು ನೆರವಾಗಲಿದೆ. ದೇಹದಲ್ಲಿ ಗ್ಲುಕೋಸ್ ಮಟ್ಟ ತಗ್ಗಿಸಲು ಕ್ಲೋರೊಜೆನಿಕ್ ಆಮ್ಲವು ಸಹಕಾರಿ ಮತ್ತು ಹೊಸ ಕೊಬ್ಬಿನಾಮ್ಲಗಳನ್ನು ಉತ್ಪತ್ತಿಯಾಗದಂತೆ ಇದು ತಡೆಯುವುದು.
- ಹೀಗಾಗಿ ದೇಹಕ್ಕೆ ಕಡಿಮೆ ಕ್ಯಾಲರಿಯು ಸಿಗುವುದು ಹಾಗೂ ತೂಕ ಕಡಿಮೆ ಆಗುವುದು. ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಇದನ್ನು ನೀವು ಸೇವನೆ ಮಾಡಿದರೆ, ಆಗ ಒಳ್ಳೆಯ ಫಲಿತಾಂಶ ಪಡೆಯಬಹುದು. ಇದಕ್ಕೆ ಮೊದಲು ನೀವು ವೃತ್ತಿಪರರ ನೆರವು ಪಡೆಯಿರಿ.
- ಕಾಫಿ ಕುಡಿದ ಕೂಡಲೇ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದು ನಿಮಗೆ ಅನಿಸಿದೆಯಾ? ಕಾಫಿಯಲ್ಲಿ ಮೂತ್ರವರ್ಧಕ ಗುಣವು ಇದ್ದು, ಇದು ಮೂತ್ರ ವಿಸರ್ಜನೆ ಹೆಚ್ಚಿಸುವುದು.
- ಇದು ದೇಹದಲ್ಲಿ ನೀರಿನ ತೂಕವನ್ನು ಕಡಿಮೆ ಮಾಡುವುದು. ಆದರೆ ವೈಜ್ಞಾನಿಕವಾಗಿ ದೇಹದ ನೀರಿನಾಂಶವನ್ನು ಇದು ತೆಗೆಯುವುದು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲವೆಂದು ಅಧ್ಯಯನಗಳು ಹೇಳಿವೆ.
- ಕಾಫಿಯಲ್ಲಿ ತುಂಬಾ ಕಡಿಮೆ ಕ್ಯಾಲರಿ ಇದ್ದು, ದೇಹದ ತೂಕ ಇಳಿಸಲು ಇದು ಸಹಕಾರಿ. ಅದೇ ರೀತಿಯಲ್ಲಿ ಇದು ದೇಹವನ್ನು ಉತ್ತೇಜಿಸುವ ಮೂಲಕ ಚುರುಕಾಗಿ ಇಡುವುದು.