ಥೈರಾಯ್ಡ್ (Thyroid) ಸಮಸ್ಯೆಗಳು ಪ್ರಪಂಚದಾದ್ಯಂತ ಸಾಮಾನ್ಯವಾಗಿದೆ. ಇದು ಹೆಚ್ಚಿನ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿದೆ. ಥೈರಾಯ್ಡ್ ಇದ್ದರೆ ಕೆಲವರು ದಪ್ಪವಾಗುತ್ತಾರೆ, ಇನ್ನೂ ಕೆಲವರು ಸಣ್ಣ ಆಗುತ್ತಾ ಹೋಗುತ್ತಾರೆ. ಹಾಗಾದ್ರೆ ಈ ಥೈರಾಯ್ಡ್ ಅಂದ್ರೆ ಏನು? ಹೇಗೆ ಬರುತ್ತೆ? ಲಕ್ಷಣಗಳೇನು? ಚಿಕಿತ್ಸೆ ಹೇಗೆ ಎಂಬುದರ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.
ಥೈರಾಯ್ಡ್ ತೂಂದರೆಯಿಂದ ಯಾವ ಯಾವ ಕಾಯಿಲೆಗಳು ಉಂಟಾಗಬಹುದು?
* ಗಾಯ್ಟರ್ (ಗಳಗಂಡ ರೋಗ): ಥೈರಾಯ್ಡ್ ಗೃಂಥಿಯು ದೊಡ್ಡದಾಗಿ ಬೆಳೆದರೆ ಅದನ್ನು ಗಾಯ್ಟರ್ ಎಂದು ಕರೆಯುತ್ತಾರೆ.
* ಹೈಪೋಥೈರಾಯ್ಡಿಸಮ್: ಥೈರಾಯ್ಡ್ ಗೃಂಥಿ ಅಗತ್ಯಕ್ಕಿಂತ ಕಡಿಮೆ ಹಾರ್ಮೋನ್ ಉತ್ಪಾದನೆ ಮಾಡಿದರೆ ಉಂಟಾಗಬಹುದಾದ ಸಮಸ್ಯೆ.
* ಹೈಪರ್ಥೈರಾಯ್ಡಿಸಮ್: ಥೈರಾಯ್ಡ್ ಗೃಂಥಿ ಅಗತ್ಯಕ್ಕಿಂತ ಹೆಚ್ಚು ಹಾರ್ಮೋನ್ ಉತ್ಪಾದನೆ ಮಾಡಿದರೆ ಉಂಟಾಗಬಹುದಾದ ಸಮಸ್ಯೆ.
* ಥೈರಾಯ್ಡೈಟಿಸ್: ಥೈರಾಯ್ಡ್ ಗೃಂಥಿಯಲ್ಲಿ ಉರಿ-ಊತ ಉಂಟಾಗಿ ಅದರಲ್ಲಿರುವ ಹಾರ್ಮೋನಿನ ಸಂಗ್ರಹವು ರಕ್ತಕ್ಕೆ ಸೋರಿಕೆಯಾಗುವ ಸಾಧ್ಯತೆಗಳಿವೆ. ಈ ರೀತಿ ಆದಾಗ ರಕ್ತದಲ್ಲಿನ ಹಾರ್ಮೋನ್ ಮಟ್ಟದ ಹೆಚ್ಚಳ ಉಂಟಾಗಬಹುದು.
* ಥೈರಾಯ್ಡ್ ಗೃಂಥಿಯ ಗೆಡ್ಡೆಗಳು: ಕೆಲವೊಮ್ಮೆ ಸಾಮಾನ್ಯ ಗೆಡ್ಡೆಗಳಾಗಿರುತ್ತವೆ. ಅಪರೂಪವಾಗಿ ಕ್ಯಾನ್ಸರ್ ಕೂಡ ಆಗಿರಬಹುದು.
ಲಕ್ಷಣಗಳೇನು?: ಪದೇ ಪದೇ ಆಯಾಸವಾಗುವುದು, ಕೂದಲು ಉದುರುವುದು, ಅನಿಯಮಿತ ಮುಟ್ಟು ಸಮಸ್ಯೆ, ಆಗಾಗ ನಡುಕ ಉಂಟಾಗುವುದು, ಬೆವರುವಿಕೆ ಜಾಸ್ತಿ ಇರುವುದು, ಅನಿರೀಕ್ಷಿತವಾಗಿ ತೂಕ ಏರಿಕೆ ಆಗುವುದು, ಸಣ್ಣಸಣ್ಣ ವಿಷಯಕ್ಕೂ ಕೋಪ ಬರುವುದು ಇವೆಲ್ಲಾ ಥೈರಾಯ್ಡ್ ಗ್ರಂಥಿಯ ಸಾಮಾನ್ಯ ಲಕ್ಷಣಗಳು
ಪರೀಕ್ಷೆ ಹಾಗೂ ಚಿಕಿತ್ಸೆ ಹೇಗೆ?: ಥೈರಾಯ್ಡ್ ಗ್ರಂಥಿ, ಕುತ್ತಿಗೆಯ ಭಾಗದ ಸಿಟಿ ಸ್ಕ್ಯಾನ್ ಮೂಲಕ ಥೈರಾಯ್ಡ್ ಸಮಸ್ಯೆಗಳನ್ನು ತಿಳಿದುಕೊಳ್ಳಬಹುದು. ಥೈರಾಯ್ಡ್ಗೆ ಸಂಬಂಧಿಸಿದ ಸಮಸ್ಯೆಗಳಿಗೆ ಹಲವು ರೀತಿಯ ಚಿಕಿತ್ಸೆ ಮತ್ತು ಔಷಧಗಳು ಲಭ್ಯವಿವೆ. ಆದಾಗ್ಯೂ ಇದನ್ನು ಕೆಲವು ಆಯುರ್ವೇದ ಪರಿಹಾರಗಳ ಮೂಲಕ ಚಿಕಿತ್ಸೆ ಮಾಡಬಹುದು.
ಯಾವ ಆಹಾರ ಸೇವಿಸಬೇಕು?: ಬ್ರೆಜಿಲ್ ನಟ್ಸ್ ಸೆಲೆನಿಯಮ್ ಮತ್ತು ಸತುವುಗಳ ಅತ್ಯುತ್ತಮ ಮೂಲವಾಗಿದ್ದು ಥೈರಾಯ್ಡ್ ಗ್ರಂಥಿಯ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಚಿಯಾ ಮತ್ತು ಕುಂಬಳಕಾಯಿ ಬೀಜಗಳು ಸತುವಿನ ಸಮೃದ್ಧ ಮೂಲಗಳಾಗಿವೆ. ಇವುಗಳಿಂದ ರೋಗಿಯು ಅತಿಯಾಗಿ ಸೇವನೆ ಮಾಡುವುದನ್ನು ಕಡಿಮೆ ಮಾಡಬಹುದು. ಇನ್ನು ಪ್ರೋಟೀನ್ನ ಈ ಸಮೃದ್ಧ ಮೂಲಗಳು ನಿಮ್ಮ ಚಯಾಪಚಯವನ್ನು ಸುಧಾರಿಸುತ್ತದೆ. ಹೆಚ್ಚು ಊಟ ತಿನ್ನಬೇಕು ಎನ್ನಿಸಲ್ಲ. ಇದರಿಂದ ನಿಮ್ಮ ತೂಕವನ್ನು ನಿಯಂತ್ರಿಸಬಹುದು