ಬೆಂಗಳೂರು : ಮೈತ್ರಿ ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಜಯದೇವ ಆಸ್ಪತ್ರೆ ನಿವೃತ್ತ ನಿರ್ದೇಶಕ ಡಾ.ಮಂಜುನಾಥ್ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ ಅವರು, ಡಾ.ಮಂಜುನಾಥ್ ಅವರು ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ಬಗ್ಗೆ ಅಪಾರ ಗೌರವವಿದೆ. ಎಲ್ಲ ಕಡೆಗಳಲ್ಲೂ ರಾಜಕೀಯ ಬರಬೇಕು ಅಂತಾ ಹೇಳ್ತಿದ್ದಾರೆ. ಅವರು ಹೇಳಿದ್ದಾರೆ. ಇನ್ನೂ ತೀರ್ಮಾನ ಮಾಡಿಲ್ಲ ಅಂದಿದ್ದಾರೆ. ಏನಾಗುತ್ತೋ..! ಮುಂದೆ ನೋಡೋಣ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ನುಡಿದರು.