ದೇವನಹಳ್ಳಿ: ದೆಹಲಿಯಿಂದ ಆಗಮಿಸಿ ಏರ್ಪೋಟ್ ನಲ್ಲಿ ಕೆಹೆಚ್ ಮುನಿಯಪ್ಪ (KH Muniappa) ಅವರು, ಹೈಕಮಾಂಡ್ ಸೂತ್ರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನಾವು ಏನು ಹೇಳಲು ಆಗುವುದಿಲ್ಲ ಎಂದಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ದಲಿತ ಡಿಸಿಎಂ ರೇಸ್ನಲ್ಲಿ ನಾನೇನು ಇಲ್ಲ. ನಾನು ದೇಶದಲ್ಲಿ ಮಂತ್ರಿಯಾಗಿದ್ದವನು. ರಾಜ್ಯದಲ್ಲಿ ನನಗೆ ಮಂತ್ರಿಸ್ಥಾನ ಬೇಕು ಅಂತೇನಿಲ್ಲ. ನೀವು ರಾಜ್ಯದಲ್ಲಿ ಸ್ಪರ್ಧೆ ಮಾಡಿ ಅಂತ ಹೈಕಮಾಂಡ್ ಹೇಳಿತ್ತು. ಅದ್ರಂತೆ ನಾನು ಸ್ವರ್ಧಿಸಿ ಗೆದ್ದೀದ್ದೇನೆ. ಉಳಿದದ್ದು ಹೈಕಮಾಂಡ್ಗೆ ಬಿಟ್ಟದ್ದು ಎಂದರು.