ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲೂ 40% ಕಮೀಷನ್ ಮುಂದುವರೆದಿದೆ ಎಂಬ ಕೆಂಪಣ್ಣ ಆರೋಪ ವಿಚಾರ ಸಂಬಧಿಸಿದಂತೆ ಶಾಸಕ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಮ್ಮ ಅವಧಿಯಲ್ಲಿ ಕೆಂಪಣ್ಣ ಕಮೀಷನ್ ಆರೋಪ ಮಾತ್ರ ಮಾಡಿದ್ರು, ಆದ್ರೆ ಅದರಲ್ಲಿ ಸ್ಪಷ್ಟತೆ ಇರಲಿಲ್ಲ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದಾಗಲೂ ಅವರು ದಾಖಲೆ ಕೊಟ್ಟಿರಲಿಲ್ಲ ಕೆಂಪಣ್ಣ ಅವರು ಈ ಬಾರಿ ಸತ್ಯ ಹೇಳಿದ್ದಾರೆ ಈ ಬಾರಿ ಒಳ್ಳೇ ವಿಷಯವೇ ಅವರ ಗಮನಕ್ಕೆ ಈಗಲಾದರೂ ಬಂದಿದೆಯಲ್ಲ ಎಂದರು.
ಕಾಂಗ್ರೆಸ್ ಪರ ಇದ್ದಂತಹ ವ್ಯಕ್ತಿ ಕಾಂಗ್ರೆಸ್ ವಿರುದ್ಧವೇ 40% ಕಮೀಷನ್ ಆರೋಪ ಮಾಡ್ತಿದ್ದಾರೆ ಅಂದರೆ ಅವರ ಬಳಿ ಮಾಹಿತಿ ಮತ್ತು ದಾಖಲೆಗಳು ಸೂಕ್ತವಾಗಿ ಸಿಕ್ಕಿರುತ್ತವೆ ಅವರೊಬ್ಬ ಕಾಂಗ್ರೆಸ್ ಸದಸ್ಯರಾಗಿದ್ದವರು, ಒಳ್ಳೇ ದಾಖಲೆಗಳನ್ನೇ ಬಿಡುಗಡೆ ಮಾಡಬಹುದೇನೋ? ಅಧಿಕಾರಿಗಳೇ ಕಮೀಷನ್ ಸಂಗ್ರಹ ಮಾಡಿ ರಾಜಕಾರಣಿಗಳಿಗೆ ಕೊಡ್ತಿದ್ದಾರೆ ಅಂತ ಹೇಳಿದ್ದಾರೆ
ಯಾವೆಲ್ಲ ಅಧಿಕಾರಿಗಳು ಕಮೀಷನ್ ಏಜೆಂಟ್ಗಳಾಗಿದ್ದಾರೆ ಅಂತ ಹೇಳಲಿ ವಿನಾಕಾರಣ ಆರೋಪ ಮಾಡೋದು ಬೇಡ ಕೆಂಪಣ್ಣ ಆ ಅಧಿಕಾರಿಗಳು ಯಾರು ಅಂತ ಹೇಳಲಿ
ಇನ್ನು ಪ್ಯಾಕೇಜ್ ಟೆಂಡರ್ ಗಳಿಗೆ ಈಗಾಗಲೇ ತೆಲಂಗಾಣ ಗುತ್ತಿಗೆದಾರರು ಬಂದಿದ್ದಾರೆ ತೆಲಂಗಾಣ ಗುತ್ತಿಗೆದಾರರು ಕೆಲವು ಪ್ರಭಾವಿ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ, ಅವರ ಜತೆ ಪ್ಯಾಕೇಜ್ ಟೆಂಡರ್ ಗಳಿಗೆ ಒಪ್ಪಂದ ಕೂಡಾ ಆಗಿದೆ 20 ಕೋಟಿ, 10 ಕೋಟಿ, 5 ಕೋಟಿ ಟೆಂಡರ್ ಮಾಡಿದರೆ ಸ್ಥಳೀಯ ಗುತ್ತಿಗೆದಾರರಿಂದ ಸಮಸ್ಯೆ ಆಗ್ತಿದೆ ಅಂತ ಹೊರಗಿನವರಿಗೆ ಗುತ್ತಿಗೆ ಕೊಡ್ತಿದ್ದಾರೆ ಕೆಲಸದ ಸಮಸ್ಯೆ ಅಲ್ಲ, ಯಾರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಅನ್ನೋದೇ ಇವರ ಸಮಸ್ಯೆ ಹೊರಗಿನ ರಾಜ್ಯಗಳಿಂದ ಗುತ್ತಿಗೆದಾರರು ಬರ್ತಿದ್ದಾರೆ ಕೆಂಪಣ್ಣ ಮಾತು ಕೇಳಿ ನಮ್ಮ ಗುತ್ತಿಗೆದಾರರು ಶೀಘ್ರದಲ್ಲಿ ನಿರುದ್ಯೋಗಿಗಳಾಗಲಿದ್ದಾರೆ ಎಂದು ಹೇಳಿದರು.