ಮಂಡ್ಯ: ಪ್ರಸ್ತುತ ಮಳೆ ಸಮಸ್ಯೆ ಎದುರಾಗಿದೆ. ಮತ್ತೊಂದೆಡೆ ತಮಿಳುನಾಡು ತನ್ನ ಪಾಲಿನ ನೀರಿಗೆ ಬೇಡಿಕೆಯಿಟ್ಟಿದೆ. ರಾಜ್ಯದಲ್ಲೇ ಕುಡಿಯುವ ನೀರಿಗೆ ಸಮಸ್ಯೆ ಇರುವಾಗ ತಮಿಳುನಾಡಿಗೆ ನೀರು ಬಿಡುವುದಾದರೂ ಹೇಗೆ? ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರು ಕಾವೇರಿ ನೀರಿಗಾಗಿ ತಮಿಳುನಾಡು ಒತ್ತಡ ಹೇರುತ್ತಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ಕೆಆರ್ಎಸ್ ಅಣೆಕಟ್ಟೆಯಲ್ಲಿ ಅಲ್ಪ ಪ್ರಮಾಣದಲ್ಲಿ ನೀರು ಶೇಖರಣೆಯಾದ ಬೆನ್ನಲ್ಲೇ ಕೇಂದ್ರದ ನೀರು ನಿರ್ವಹಣಾ ಸಮಿತಿ ಎದುರು ತಮಿಳುನಾಡು ನೀರಿಗಾಗಿ ಬೇಡಿಕೆ ಇಟ್ಟಿದೆ.
ಈ ಕುರಿತು ಕಾವೇರಿ ನೀರಾವರಿ ಸಮಿತಿ ಸಭೆಯ ಬಳಿಕವಷ್ಟೆನಿರ್ಧಾರ ಕೈಗೊಳ್ಳಲು ಸಾಧ್ಯ ಎಂದು ಉತ್ತರಿಸಿದರು. ಈ ತಿಂಗಳಾಂತ್ಯಕ್ಕೆ ರಾಜ್ಯದಲ್ಲಿ ಮಳೆಯಾಗುವ ಎಣಿಕೆ ಇದೆ. ಅದಾದರೂ ಹೇಗೆ ಭರವಸೆ ಇಟ್ಟುಕೊಳ್ಳುವುದು? ತಮಿಳುನಾಡು ವಾಡಿಕೆ ಪ್ರಕಾರ ಬಿಡಬೇಕಾದ ನೀರನ್ನು ಕೇಳುತ್ತಿದೆ. ಈ ಬಗ್ಗೆ ಮೊದಲು ಸಭೆ ನಡೆಸಲಿದ್ದೇವೆ, ಅಲ್ಲದೆ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರ ಜೊತೆಗೂ ಚರ್ಚಿಸಲಾಗುವುದು ಎಂದರು.