ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿ ಸಾಕಷ್ಟು ಸಮಯ ಕಳೆದಿದೆ. ಪೊಲೀಸರು ಸಾಕಷ್ಟು ಸ್ಟ್ರಾಂಗ್ ಎವಿಡೆನ್ಸ್ ಕಲೆ ಹಾಕಿದ್ದು ಸದ್ಯದ ಮಟ್ಟಿಗೆ ದರ್ಶನ್ ಹೊರ ಬರುವುದು ಅನುಮಾನವೇ ಆಗಿದೆ. ಈಗಾಗಲೇ ಹಲವಾರು ಚಿತ್ರನಟ ನಟಿಯರು ದರ್ಶನ್ ಭೇಟಿಗೆ ಅವಕಾಶ ಕೋರಿ, ಅವರನ್ನು ಹೋಗಿ ಜೈಲಿನಲ್ಲಿ ಭೇಟಿಯಾಗಿ ಬಂದಿದ್ದಾರೆ. ಇದೀಗ ನಟಿ ರಚಿತಾ ರಾಮ್ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ.
ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಪರಪ್ಪನ ಅಗ್ರಹಾರಕ್ಕೆ ತೆರಳಿ, ದರ್ಶನ್ರನ್ನು ಭೇಟಿಯಾಗಿ ಬಂದಿದ್ದಾರೆ. ದರ್ಶನ್ ಜೈಲು ಸೇರಿ 2 ತಿಂಗಳಗಳ ಬಳಿಕ ರಚಿತಾ ರಾಮ್ ಮೊದಲ ಬಾರಿಗೆ ಅವರನ್ನು ಭೇಟಿಯಾಗಿದ್ದಾರೆ.
ದರ್ಶನ್ ಆಪ್ತ ಸಚ್ಚಿದಾನಂದ್ ಜೊತೆ ರಚಿತಾ ರಾಮ್ ಜೈಲಿಗೆ ಆಗಮಿಸಿದ್ದರು. ಈ ವೇಳೆ ಮೂರುಬ್ಯಾಗ್ ಗಳನ್ನು ನಟಿ ತಂದಿದ್ದರು. ದರ್ಶನ್ ರನ್ನು ಭೇಟಿಯಾದ ಬಳಿಕ ಮಾತನಾಡಿದ ರಚಿತಾ ರಾಮ್, ನಾನು ಅವರ ಬ್ಯಾನರ್ನಿಂದಲೇ ಇಂಟ್ರಡ್ಯೂಸ್ ಆಗಿದ್ದು. ಅವ್ರು ನನಗೆ ಅವಕಾಶ ಕೊಡಲು ನೋ ಅಂದಿದ್ರೆ, ಬಿಂದ್ಯಾ ರಚಿತಾ ರಾಮ್ ಆಗುತ್ತಿರಲಿಲ್ಲ. ಅವರನ್ನ ನೋಡಿದ ಕೂಡಲೇ ನಾವೆಲ್ಲಾ ಭಾವುಕರಾದ್ವಿ, ಅವರೇ ನಮಗೆ ಧೈರ್ಯ ಹೇಳಿದ್ರು, ಸಮಾಧಾನ ಮಾಡಿದ್ರು ಎಂದರು. ದರ್ಶನ್ ನನ್ನ ಗುರು ಅಂತ ಇತ್ತೀಚಿಗೆ ಒಂದು ಪೋಸ್ಟ್ನಲ್ಲಿ ತಿಳಿಸಿದ್ದ ರಚಿತಾ, ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿರೋದು ನಂಬಲು ಕಷ್ಟ ಸಾಧ್ಯ ಎಂದು ತಿಳಿಸಿದ್ದರು.