ಬೆಂಗಳೂರು: ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷದ ತೀರ್ಮಾನ, ಶಾಸಕರ ಅಭಿಪ್ರಾಯವನ್ನು ನಾವು ಒಪ್ಪಬೇಕು. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂದ್ರೆ ಪಕ್ಷದ ಘನತೆಗೆ ಧಕ್ಕೆ ಬರುತ್ತೆ.
ನಾವೆಲ್ಲರೂ ಅಶೋಕ್ಗೆ ಸಹಕಾರ ಕೊಡುತ್ತೇವೆ. ಯತ್ನಾಳ್ ಸೇರಿದಂತೆ ಒಂದಿಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಿರಂಗವಾಗಿ ಯತ್ನಾಳ್ ಆ ರೀತಿ ಮಾತನಾಡುವುದು ಸರಿಯಲ್ಲ. ಯಡಿಯೂರಪ್ಪ ಸಿಎಂ ಆಗಿದ್ರೆ ನಮಗೆ ಈ ದುಸ್ಥಿತಿ ಬರುತ್ತಿರಲಿಲ್ಲ. ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡಿದಷ್ಟು ಡ್ಯಾಮೇಜ್ ಆಗುತ್ತದೆ ಎಂದರು.