ಬೆಂಗಳೂರು: 2023ರ ವರ್ಷಕ್ಕೆ ಗುಡ್ ಬೈ ಹೇಳೋಕೆ ಕೌಂಟ್ ಡೌನ್ ಶುರುವಾಗಿದೆ.ಇತ್ತ ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನ ವೆಲ್ ಕಮ್ ಮಾಡೋಕೆ ಕಾತುರರಾಗಿರೋ ಹೊತ್ತಲ್ಲೇ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಕೂಡ ನ್ಯೂ ಇಯರ್ ಸೆಲೆಬ್ರೇಷನ್ ನಲ್ಲಿ ಲೋಪವಾಗದಂತೆ ತಡೆಯೋಕೆ ಪ್ಲಾನ್ ನಡೆಸಿದೆ.
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಪತ್ರಿಕಾಗೋಷ್ಠಿ ನಡೆಸಿ ಸಿದ್ಧತೆ ಬಗ್ಗೆ ಮಾತನಾಡಿದರು. ಬೇಗೂರಿನಲ್ಲಿ ಸಿಲಿಂಡರ್ ಬ್ಲಾಸ್ಟ್ ಘಟನೆ ಬಗ್ಗೆ ಗಮನವಹಿಸಲಾಗಿದೆ ಅಕ್ರಮ ಗ್ಯಾಸ್ ಸಿಲಿಂಡರ್ ಅಡ್ಡೆಗಳ ಮೇಲೆ ಕಣ್ಣಿಡಲಾಗಿದೆ ಕೋರಮಂಗಲದ ಅಕ್ರಮ ಗ್ಯಾಸ್ ಸಿಲಿಂಡರ್ ಅಡ್ಡೆ ಮೇಲೆ ದಾಳಿ ನಡೆಸಲಾಗಿದೆ 120ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಗಳನ್ನ ವಶಪಡೆಯಲಾಗಿದೆ ಅಕ್ರಮವಾಗಿ ನಡೆಸ್ತಿರೋ ಪ್ರೈವೆಟ್ ಗ್ಯಾಸ್ ಅಡ್ಡೆಗಳನ್ನ ಮುಚ್ಚಲಾಗುತ್ತೆ. ಈ ರೀತಿಗ ಘಟನೆಗಳಿಗೆ ಕಡಿವಾಣ ಹಾಕಲಾಗುತ್ತೆ ಎಂದು ಹೇಳಿದರು.
ಹಾಗೆ ನ್ಯೂ ಇಯರ್ ಗೆ ಸಂಬಂಧಿಸಿದಂತೆ ಸಭೆಗಳನ್ನ ನಡೆಸಲಾಗ್ತಿದೆ ಆಚರಣೆ ನಡೆಸೋ ಯಾರಿಗೂ ಕೂಡ ಅಡಚಣೆ ಆಗದ ರೀತಿ ನೋಡಿಕೊಳ್ಳಲಾಗುತ್ತೆ.. ಕಳೆದಬಾರಿ ಹೇಗೆ ನಡೆಸಲಾಗಿತ್ತೋ ಈ ಬಾರಿಯೂ ಅದೇ ರೀತಿ ಇರುತ್ತೆ.. ಎಮ್ ಜಿ ರೋಡ್ ನಲ್ಲಿ ಮಧ್ಯರಾತ್ರಿ ಅನುಮತಿ ಬಗ್ಗೆಯೂ ಚರ್ಚೆ ನಡೆಸಲಾಗ್ತಿದೆ.
ಕೋವಿಡ್ ಹೊಸ ಅಲೆಯ ಬಗ್ಗೆಯೂ ಅಧಿಕಾರಿಗಳ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಾಗುತ್ತೆ ಹೊಸ ವರ್ಷಕ್ಕೆ ಯಾವುದೇ ರೀತಿ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿಕೆ ನೀಡಿದರು.