ಬೆಂಗಳೂರು: ಸಿಟಿಐ ಮತ್ತು ಪಿಎಸ್ಐ ಪರೀಕ್ಷಾ ಅಕ್ರಮ ವಿಚಾರ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪಿಎಸ್ಐ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಬ್ಇನ್ಸ್ಪೆಕ್ಟರ್ ಓರ್ವರನ್ನು ಸಿಸಿಬಿ ವಶಕ್ಕೆ ಪಡೆದಿದೆ, ಪಿ ಎಸ್ ಐ ಲಿಂಗಯ್ಯ ಅವರು ಗುಪ್ತದಳದಲ್ಲಿದ್ದಾರೆ ನಾವು ಎಚ್ಚರಿಕೆ ವಹಿಸಬೇಕು ಅದಕ್ಕೆ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲೇ ಹಾಕಿದ್ದೆವೆ ಈ ಮದ್ಯೆ ಗುಪ್ತದಳದವರು ಮಾಹಿತಿ ಕಲೆಹಾಕ್ತಿದ್ದಾರೆ ಮಾಹಿತಿ ಪಡೆಯುವಾಗ ಈ ಆಡಿಯೋ ಬೆಳಕಿಗೆ ಬಂದಿದೆ ಎಂದರು.
ನಾನು ಇಂಟಲಿಜೆನ್ಸ್ ಮಾಹಿತಿ ಕಲೆ ಹಾಕಲು ಪೇಕ್ ಆಡಿಯೋ ಮಾಡಿದ್ದೆ ಅಂತ ಹೇಳಿಕೆ ಕೊಟ್ಟಿದ್ದೆ ಅಂತ ಹೇಳಿದ್ದಾನೆ ಅದನ್ನ ಸಿಸಿಬಿ ವಿಚಾರಣೆ ಮಾಡ್ತಿದೆ ಇದು ನಿಜವಾ ಅಲ್ಲವಾ ಎಂಬೋದನ್ನ ವಿಚಾರಣೆ ಆಗ್ತಿದೆ
ಎಲ್ಲಾ ರೀತಿಯ ಮುಂಜಾಗ್ರತೆ ತಗೆದುಕೊಂಡು ಪರೀಕ್ಷೆ ಮಾಡಬೇಕು ಅಂತ ಮಾಡಿದ್ದೆವೆ ಮೂರು ವರ್ಷ ಆಯ್ತು. ಇದುವರೆಗೆ ನೇಮಕಾತಿ ಮಾಡಲು ಆಗಿಲ್ಲ ಅಂದ್ರೆ ಸಿಸ್ಟಮ್ ನಡೆಯಲ್ಲ ಸಿಸಿಬಿ ತನಿಖೆ ಮಾಡ್ತಿದ್ದು,ಅಕ್ರಮ ಆಗಿದ್ರೆ ಕ್ರಮ ತಗೆದುಕೊಳ್ಳುತ್ತೇವೆ ಎಂದು ಹೇಳಿದರು.