ಮಧುಮೇಹವು ಒಂದು ರೀತಿಯ ವೈದ್ಯಕೀಯ ಸ್ಥಿತಿಯಾಗಿದೆ. ಸಕ್ಕರೆಯ ಮಟ್ಟ ಅಧಿಕವಾದರೆ ಅದು ನರಗಳು, ಮೂತ್ರಪಿಂಡಗಳು ಹಾಗೂ ದೇಹದ ಇತರ ಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಮಧುಮೇಹ ರೋಗಿಗಳು ಏನು ತಿನ್ನುತ್ತಾರೆ ಮತ್ತು ಅವರು ಯಾವಾಗ ತಿನ್ನುತ್ತಾರೆ? ಈ ರೀತಿಯ ವಿಷಯಗಳು ಬಹಳ ಮುಖ್ಯ. ಮಧುಮೇಹಿಗಳು ಒಂದು ಹೊತ್ತಿನ ಊಟವನ್ನು ಬಿಟ್ಟರೆ ಅದು ಅವರ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತಾ? ನಾವು ನಿಮಗೆ ಒಂದು ಊಟವನ್ನು ಬಿಟ್ಟುಬಿಡುವುದು ಮಧುಮೇಹ ರೋಗಿಗೆ ಹೇಗೆ ಅಪಾಯಕಾರಿಯಾಗಿದೆ. ಅವರಯ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಮುಖ್ಯ ಯಾಕೆ ಎನ್ನುವುದನ್ನು ತಿಳಿಯೋಣ.
ನೀವು ಮಧುಮೇಹ ಹೊಂದಿದ್ದು, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇದ್ದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದು ನಿಮ್ಮ ಚೇತರಿಕೆಗೆ ಅಡ್ಡಿಯಾಗಬಹುದು. ವಿಶೇಷವಾಗಿ, ಇನ್ಸುಲಿನ್ ಅಥವಾ ಮಧುಮೇಹ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳುವ ಜನರಿಗೆ ಇದು ಹೆಚ್ಚು ಅಪಾಯಕಾರಿಯಾಗಿದೆ. ನೀವು ಆಹಾರವನ್ನು ಸೇವಿಸದಿದ್ದಾಗ, ರಕ್ತದಲ್ಲಿನ ಸಕ್ಕರೆ ಮಟ್ಟವು ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ. ಮಧುಮೇಹಕ್ಕೆ ಸಾಮಾನ್ಯ ಔಷಧಗಳು ಅಥವಾ ಇನ್ಸುಲಿನ್ ತೆಗೆದುಕೊಳ್ಳುವವರು ಪ್ರತಿ ದಿನ ನಿಗದಿತ ಸಮಯದಲ್ಲಿ ಪೌಷ್ಟಿಕ ಆಹಾರ ಸೇವಿಸಬೇಕು.
ನೀವು ದೀರ್ಘಕಾಲ ತಿನ್ನದಿದ್ದರೆ ಅಥವಾ ಯಾವುದೇ ಊಟವನ್ನು ಬಿಟ್ಟುಬಿಟ್ಟರೆ, ಅದು ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ. ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದಲ್ಲ. ಏಕೆಂದರೆ ಹಸಿವಿನ ಭಾವನೆಯು ದೇಹದಲ್ಲಿ ದೌರ್ಬಲ್ಯವನ್ನು ಉಂಟುಮಾಡುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ನೀವು ಊಟವನ್ನು ಬಿಟ್ಟ ನಂತರ ಆಹಾರವನ್ನು ಸೇವಿಸಿದಾಗ, ನೀವು ಹಸಿದಿರುವ ಕಾರಣ ಅಧಿಕ ಊಟವನ್ನು ಸೇವಿಸುತ್ತೀರಿ.
ಒಂದು ಸಮಯದಲ್ಲಿ ತುಂಬಾ ಮತ್ತು ಅನಾರೋಗ್ಯಕರ ಆಹಾರವನ್ನು ಸೇವಿಸುವುದು ಸರಿಯಲ್ಲ. ಅನಾರೋಗ್ಯಕರ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹಠಾತ್ತನೆ ಹೆಚ್ಚಾಗಬಹುದು. ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚುವುದು ಮಧುಮೇಹ ರೋಗಿಗಳಿಗೆ ಒಳ್ಳೆಯದಲ್ಲ. ಕೆಲವು ಗಂಭೀರ ಪ್ರಕರಣಗಳಲ್ಲಿ ಇದು ಮಾರಣಾಂತಿಕವೂ ಆಗಬಹುದು.
ಕೆಲವೊಮ್ಮೆ ಊಟ ಮಾಡಲು ಮನಸ್ಸಿರೋದಿಲ್ಲ ಅಥವಾ ಅನಾರೋಗ್ಯದ ಕಾರಣದಿಂದಾಗಿ ಆಹಾರ ತಿನ್ನದೇ ಇರಬಹುದು ಇಂತಹ ಕಾರಣಗಳಿಂದ ನೀವು ಊಟವನ್ನು ಬಿಟ್ಟುಬಿಡಲು ಬಯಸಿದರೆ, ಕೆಲವು ವಿಷಯಗಳನ್ನು ಪರಿಗಣಿಸುವುದು ಉತ್ತಮ, ಉದಾಹರಣೆಗೆ-
ಊಟವನ್ನು ಬಿಡುವ ಮೊದಲು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. ರಕ್ತದಲ್ಲಿನ ಸಕ್ಕರೆಯು ಸಮತೋಲಿತವಾಗಿದ್ದರೆ, ನೀವು ಊಟವನ್ನು ಬಿಟ್ಟುಬಿಡಬಹುದು. ಆದರೆ, ದೀರ್ಘಕಾಲ ಹಸಿವಿನಿಂದ ಇರುವುದನ್ನು ತಪ್ಪಿಸಿ.
ನೀವು ತಿನ್ನಲು ಇಷ್ಟವಿರದೇ ಇರಬಹುದು, ಆದರೆ ಹಸಿದಿರಬಹುದು, ವಿಪರೀತವಾಗಿ ಬೆವರುತ್ತಿದ್ದರೆ ದುರ್ಬಲ ಮತ್ತು ಆತಂಕದ ಭಾವನೆಯನ್ನು ಅನುಭವಿಸುತ್ತಿದ್ದರೆ ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ಮಾಡಬೇಡಿ. ಊಟ ಮಾಡದೇ ಇರುವುದನ್ನು ತಪ್ಪಿಸಿ. ಅಗತ್ಯವಿದ್ದರೆ, ವೈದ್ಯರನ್ನು ಸಂಪರ್ಕಿಸಿ.