ಬೆಂಗಳೂರು: ನಗರದ ಅಂದ್ರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ ವಿಚಾರ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳನ್ನು ಯಾವ ಕಾರಣಕ್ಕೂ ಆ ರೀತಿ ಮಾಡಿಸಬಾರದು. ಈಗ ನಾನು ವಿಧಾನಸೌಧದಲ್ಲಿ ಸಭೆ ಕರೆದಿದ್ದೇನೆ ನನಗೆ ವಿಚಾರ ಗೊತ್ತಾಗಿದೆ. ಮೂರು ಗಂಟೆಗೆ ಸಭೆ ಕರೆದಿದ್ದು ಅಲ್ಲೆ ಇದರ ಬಗ್ಗೆ ವರದಿ ತರಿಸಿಕೊಳ್ತಿದ್ದೇನೆ ಎಂದು ಹೇಳಿದರು.
ನಿನ್ನೆಯೂ ಇದೇ ರೀತಿ ಘಟನೆ ಆದಾಗ ಕಾನೂನು ಕ್ರಮ ಕೈಗೊಂಡಿದ್ದೆವು. ಮಕ್ಕಳಿಗೆ ಶಕ್ತಿಕೊಡುವ ಕೆಲಸ ಮಾಡಬೇಕು ಶಾಲೆಯಲ್ಲಿ ಕಮಿಟಿ ಇದೆ ಸ್ವಚ್ಚತೆ ಮಾಡುವ ಸಂಧರ್ಭದಲ್ಲಿ ಅವರು ಕ್ರಮ ವಹಿಸಬೇಕು ಮಕ್ಕಳನ್ನ ದುರುಪಯೋಗ ಮಾಡೋದನ್ನ ತಡೆಯಬೇಕಿದೆ
ಎನ್ಎಸ್ಎಸ್ ಆ ಜಾಗವನ್ನ ಸ್ವಚ್ಚತೆ ಮಾಡೋದು, ಗಿಡ ನೆಡೋದು ಮಾಡ್ತಿದ್ರು ಈಗ ಶೌಚಾಲಯ ಸ್ವಚ್ಚತೆ ಮಾಡೋದಕ್ಕೆ ಬಿಡೋದಿಲ್ಲ ಮುಂದಕ್ಕೂ ಬಿಡೋದಿಲ್ಲ ಏನು ಕ್ರಮ ಕೈಗೊಳ್ಳಬೇಕು ಮಾಡ್ತೀವಿ ಎಂದು ಹೇಳಿದರು.