ಟೀಮ್ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ತಮ್ಮ ವಿಚ್ಛೇದನವನ್ನು ದೃಢಪಡಿಸಿದ್ದಾರೆ. ಇಬ್ಬರು ಸಹ ಸೋಷಿಯಲ್ ಮೀಡಿಯಾ ಮೂಲಕ 4 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳುತ್ತಿರುವುದಾಗಿ ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ವಿಚ್ಛೇದಿತ ಪತ್ನಿ ನತಾಶಾಗೆ ಪಾಂಡ್ಯ ಕಡೆಯಿಂದ ಸಿಗುವ ಜೀವನಾಂಶ ಎಷ್ಟು ಎಂಬ ಚರ್ಚೆಗಳು ಶುರುವಾಗಿದೆ.
ಈ ಹಿಂದೆ ಹಾರ್ದಿಕ್ ಪಾಂಡ್ಯ ಡೈವೋರ್ಸ್ ನೀಡಿದರೆ, ತನ್ನ ಆಸ್ತಿಯಲ್ಲಿ ಶೇ.70 ರಷ್ಟು ಪತ್ನಿಗೆ ನೀಡಬೇಕಾಗುತ್ತದೆ ಎಂಬ ವರದಿಗಳಾಗಿದ್ದವು. ಟೀಮ್ ಇಂಡಿಯಾ ಉಪನಾಯಕ ಮತ್ತು ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ನಿವ್ವಳ ಮೌಲ್ಯ 11.4 ಮಿಲಿಯನ್, ಅಂದರೆ ಅಂದಾಜು 94 ಕೋಟಿ ರೂಪಾಯಿಗಳು.
ಭಾರತೀಯ ಆಲ್ ರೌಂಡರ್ ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿದ್ದ ಪಾಂಡ್ಯ ಅವರು ಐಪಿಎಲ್ ಸಂಬಳದಿಂದ ಸರಿಸುಮಾರು 74.3 ಕೋಟಿ ಗಳಿಸಿದ್ದಾರೆ. 30 ವರ್ಷ ಕ್ರಿಕೆಟರ್ ಬರೋಡಾದಲ್ಲಿ 3.1 ಕೋಟಿ ರೂಪಾಯಿ ಮೌಲ್ಯದ ಪೆಂಟಾ ಹೌಸ್ ಹೊಂದಿದ್ದಾರೆ ಮತ್ತು ಬಾಂದ್ರಾದಲ್ಲಿ 30 ಕೋಟಿ ರೂಪಾಯಿ ಮೌಲ್ಯದ ಅದ್ದೂರಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಹಾರ್ದಿಕ ಪಾಂಡ್ಯ ಅವರು ಕೇವಲ ಕ್ರಿಕೆಟ್ ನಿಂದ ಮಾತ್ರವಲ್ಲದೆ ಬ್ರಾಂಡ್ ಎಂಡಾರ್ಸ್ಮೆಂಟ್ಗಳಿಂದಲ್ಲೂ ದೊಡ್ಡ ಮೊತ್ತದ ಹಣ ಗಳಿಸುತ್ತಾರೆ.
ಪಾಂಡ್ಯ ಅವರು ಗಲ್ಫ್ ಆಯಿಲ್, ಸ್ಟಾರ್ ಸ್ಪೋರ್ಟ್ಸ್, ಗೆಲ್ಲೆಟ್, ಬೋಟ್, ಡ್ರೀಮ್ 11, ಅಮೇಜಾನ್ ಮತ್ತು ಒಪ್ಪೋ ಜೊತೆಗೆ ಬ್ರಾಂಡ್ ಎಂಡಾರ್ಸ್ಮೆಂಟ್ಗಳನ್ನು ಹೊಂದಿದ್ದಾರೆ. ಅವರು ಪ್ರತಿ ಬ್ರಾಂಡೆಡ್ ಎಂಡಾರ್ಸ್ಮೆಂಟ್ಗಳಿಗೆ 1 ಕೋಟಿ ರೂಪಾಯಿಗಳನ್ನು ವಿಧಿಸುತ್ತಾರೆ. ಹಾರ್ದಿಕ್ ಪಾಂಡ್ಯ ಅವರು ಮರ್ಸಿಡಿಸ್ ಎಎಂಜಿ ಜಿ63, ಆಡಿ ಎ6, ಜೀಪ್ ಕ್ಯಾಂಪಸ್ ಮತ್ತು ಲ್ಯಾಂಡ್ ರೋವರ್ ರೇಂಜ್ ರೋವರ್ನಂತಹ ಐಷಾರಾಮಿ ಕಾರುಗಳನ್ನು ಹೊಂದಿರುವ ಗ್ಯಾರೇಜ್ನ ಹೆಮ್ಮೆಯ ಮಾಲೀಕರಾಗಿದ್ದಾರೆ.
ಇದೀಗ ಹಾರ್ದಿಕ್ ಪಾಂಡ್ಯ ನತಾಶಾ ಸ್ಟಾಂಕೋವಿಕ್ಗೆ ವಿಚ್ಛೇದನ ನೀಡಿದ್ದಾರೆ. ಆದರೆ ಈ ವಿಚ್ಛೇದನದ ಪರಿಹಾರವಾಗಿ ಪಾಂಡ್ಯರ ಆಸ್ತಿಯ ಶೇ.50 ರಷ್ಟು ಪಾಲು ಸಿಗುವುದು ಅನುಮಾನ. ಒಂದು ವೇಳೆ ಸಿಕ್ಕರೂ ಅದು ಅತ್ಯಲ್ಪ ಪ್ರಮಾಣದಲ್ಲಿರುತ್ತದೆ. ಏಕೆಂದರೆ ಹಾರ್ದಿಕ್ ಪಾಂಡ್ಯ ಹೇಳಿದಂತೆ ಅವರೆಲ್ಲವನ್ನು ತಾಯಿಯ ಹೆಸರಿನಲ್ಲಿ ಮಾಡಿಟ್ಟುಕೊಂಡಿದ್ದಾರೆ.